main logo

ರಾಜಕಾರಣಿಯಾಗಲು ತರಬೇತಿ ಸಂಸ್ಥೆ, ಒಂದು ವರ್ಷದ ಕೋರ್ಸ್- ಯು.ಟಿ.ಖಾದರ್

ರಾಜಕಾರಣಿಯಾಗಲು ತರಬೇತಿ ಸಂಸ್ಥೆ, ಒಂದು ವರ್ಷದ ಕೋರ್ಸ್- ಯು.ಟಿ.ಖಾದರ್

ಮಂಗಳೂರು: ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದು, ಈ ವೇಳೆ ಮಾತನಾಡಿದ ಅವರು ಜುಲೈ 3 ರಿಂದ ಅಧಿವೇಶನ ಆರಂಭವಾಗಲಿದ್ದು, ರಾಜ್ಯಪಾಲರು ಸಂದೇಶ ನೀಡಲಿದ್ದಾರೆ ಎಂದು ಹೇಳಿದರು.

ಜುಲೈ 7 ರಂದು ಸಿಎಂ ರಾಜ್ಯದ ಮುಂಗಡ ಪತ್ರ ಮಂಡಿಸ್ತಾರೆ. ಶಾಸಕರೆಲ್ಲರ ಭಾಗವಹಿಸುವಿಕೆ ಅಧಿವೇಶನದಲ್ಲಿ ಆಗಬೇಕು. ಪದವಿ ಕಲಿತ ಯುವಕರಿಗೆ ರಾಜಕೀಯ ಕ್ಷೇತ್ರದಲ್ಲಿ ಕೆಲಸ ಮಾಡಲು ತರಬೇತಿ ಕೇಂದ್ರಗಳು ಇಲ್ಲ. ಹಾಗಾಗಿ ರಾಜಕೀಯ ತರಬೇತಿ ಸಂಸ್ಥೆ ಪ್ರಾರಂಭಿಸುವ ಯೋಜನೆ ಇದೆ. ಮುಂದಿನ ದಿನಗಳಲ್ಲಿ ಈ ಯೋಜನೆ ಜಾರಿ ಮಾಡಲಿದ್ದೇವೆ. ಸದ್ಯ ಪುಣೆಯಲ್ಲಿ ಇದೆ. ಅವರ ಜೊತೆ ಚರ್ಚಿಸಿ ಒಂದು ವರ್ಷದ ಕೋರ್ಸ್ ಆರಂಭಿಸಲಿದ್ದೇವೆ.

ರಾಜ್ಯದ ಪ್ರಮುಖ ಕೇಂದ್ರದಲ್ಲೇ ಇದನ್ನು ಸ್ಥಾಪಿಸಲಾಗುವುದು, ಇದಕ್ಕೆ ಸಿಲೇಬಸ್ ಇರಲಿದೆ, ಫುಲ್ ಟೈಮ್ ಉಪನ್ಯಾಸಕರು ಇರ್ತಾರೆ. ಮಧ್ಯೆ ರಾಜಕೀಯ ನಾಯಕರು, ಮುತ್ಸದ್ದಿಗಳು ಬಂದು ತರಬೇತಿ ಕೊಡ್ತಾರೆ. ಆರು ತಿಂಗಳು‌ ಕಲಿತು ಇಂಟರ್ನ್ ಶಿಪ್ ಮುಗಿಸಬಹುದು. ಆ ಬಳಿಕ ಒಳ್ಳೆಯ ನಾಯಕ ಆಗಬಹುದು, ಅದರ ಜೊತೆಗೆ ಶಾಸಕರ ಬಳಿಯೂ ಕೆಲಸ ಮಾಡಬಹುದು ಎಂದರು.

Related Articles

Leave a Reply

Your email address will not be published. Required fields are marked *

error: Content is protected !!