ಬೇಕಾಗುವ ಸಾಮಾಗ್ರಿಗಳು :
ರವೆ ಸೇಮಿಗೆ – 400 ಗ್ರಾಂ, ಕಡ್ಲೆಬೇಳೆ- 1ಚಮಚ, ಉದ್ದಿನಬೇಳೆ – 2 ಚಮಚ , ತೆಂಗಿನ ಎಣ್ಣೆ- 3 ಚಮಚ , ಸಾಸಿವೆ – 1 ಚಮಚ , ಅರಶಿನ ಹುಡಿ – ಕಾಲು ಚಮಚ , ಕರಿಬೇವಿನ ಸೊಪ್ಪು, ಕೊತ್ತಂಬರಿ ಸೊಪ್ಪು, ಈರುಳ್ಳಿ – ಮಧ್ಯಮ ಗಾತ್ರದ್ದು 2 , ಹಸಿಮೆಣಸಿನಕಾಯಿ -2, ರುಚಿಗೆ ತಕ್ಕಷ್ಟು ಉಪ್ಪು, ನೀರು – 5 ಗ್ಲಾಸ್ .
ಮಾಡುವ ವಿಧಾನ : ಒಂದು ಬಾಣಲೆಗೆ ಸ್ವಲ್ಪ ಎಣ್ಣೆಯನ್ನು ಹಾಕಿ ಎಣ್ಣೆ ಬಿಸಿಯಾದ ಕೂಡಲೇ ಸಾಸಿವೆ, ಕಡ್ಲೆಬೇಳೆ, ಉದ್ದಿನ ಬೇಳೆ ಕರಿಬೇವಿನ ಸೊಪ್ಪು ಹಾಕಿ ಕಡ್ಲೆಬೇಳೆ ಉದ್ದಿನಬೇಳೆ ಕೆಂಪಗಾಗುವವರೆಗೆ ಹುರಿಯಿರಿ. ನಂತರ ಅದಕ್ಕೆ ಹೆಚ್ಚಿಟ್ಟುಕೊಂಡಂತಹ ಈರುಳ್ಳಿ, ಟೊಮೆಟೊ ಹಾಗೂ ಹಸಿಮೆಣಸಿನಕಾಯಿಯನ್ನು ಸೇರಿಸಿಕೊಂಡು ಜೊತೆಗೆ ಸ್ವಲ್ಪ ಉಪ್ಪು ಹಾಗೂ ಅರಿಶಿನ ಪುಡಿಯನ್ನು ಸೇರಿಸಿಕೊಂಡು ಚೆನ್ನಾಗಿ ಬಾಡಿಸಿಕೊಳ್ಳಬೇಕು.
ಟೊಮೆಟೊ ಈರುಳ್ಳಿ ಚೆನ್ನಾಗಿ ಬಾಡಿದ ನಂತರ ಅದಕ್ಕೆ 5 ರಿಂದ 6 ಗ್ಲಾಸ್ ನಷ್ಟು ನೀರನ್ನ ಹಾಕಿಕೊಂಡು ನೀರನ್ನು ಕುದಿಯಲು ಬಿಡಿ. ಒಂದು ಕುದಿ ಬಂದ ಕೂಡಲೇ ಅದಕ್ಕೆ ರವೆ ಸೇಮಿಗೆಯನ್ನ ಹಾಕಿ ಚೆನ್ನಾಗಿ ಕಲಸಿಕೊಂಡು 5 ರಿಂದ 6 ನಿಮಿಷಗಳ ಕಾಲ ಮುಚ್ಚಳ ಮುಚ್ಚಿ ಬೇಯಿಸಿ. ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೇ ಬಿಸಿ ಬಿಸಿಯಾದ ಸೇಮಿಗೆ ಬಾತ್ ಸವಿಯಲು ಸಿದ್ಧ.