ಪೆರ್ಲ: ಆಟೋ ರಿಕ್ಷಾ ಮತ್ತು ಶಾಲಾ ಬಸ್ ಪರಸ್ಪರ ಡಿಕ್ಕಿಯಾಗಿ ರಿಕ್ಷಾದಲ್ಲಿ ಸಂಚರಿಸುತ್ತಿದ್ದ ಐದು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬದಿಯಡ್ಕ ಸಮೀಪದ ಪಳ್ಳತ್ತಡ್ಕದಲ್ಲಿ ಸೋಮವಾರ ಸಂಜೆ ನಡೆದಿದೆ. ತಾಯಲಂಗಡಿ ನಿವಾಸಿ ಪ್ರಸ್ತುತ ಮೊಗ್ರಾಲಿನ ನಿವಾಸಿ ರಿಕ್ಷಾ ಚಾಲಕ ಮತ್ತು ನಾಲ್ವರು ಮಹಿಳೆಯರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಪೆರ್ಲ ಭಾಗದಿಂದ ತೆರಳುತ್ತಿದ್ದ ಮಾನ್ಯದ ಖಾಸಗಿ ಶಾಲೆಗೆ ಸೇರಿದ ಬಸ್ ಮತ್ತು ಮೊಗ್ರಲ್ ಪುತ್ತೂರು ಮೂಲದ ರಿಕ್ಷಾ ಅಪಘಾತಕ್ಕಿಡಾಗಿರುವುದಾಗಿ ವರದಿಯಾಗಿದೆ. ಮಕ್ಕಳನ್ನು ಪೆರ್ಲ ಭಾಗದಲ್ಲಿ ಇಳಿಸಿದ ಶಾಲಾ ಬಸ್ ಖಾಲಿಯಾಗಿ ಸಂಚರಿಸುತ್ತಿದ್ದಾಗ ಪಳ್ಳತ್ತಡ್ಕದ ಗುಳಿಗ ಬನದ ಸಮೀಪದ ತಿರುವಿನಲ್ಲಿ ಈ ದುರ್ಘಟನೆ ನಡೆದಿದೆ. ಶಾಲಾ ಬಸ್ ಡಿಕ್ಕಿ ಹೊಡೆದ ರಭಸಕ್ಕೆ ರಿಕ್ಷಾ ಸಂಪೂರ್ಣ ನಜ್ಜು ಗುಜ್ಜಾಗಿದೆ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಲಾಗಿದೆ.

- 26 September 2023
0
Less than a minute
Related Articles
prev
next