ಹುಬ್ಬಳ್ಳಿ: ಕಲಘಟಗಿ ತಾಲ್ಲೂಕಿನ ಭೋಗೇನಾರ ಕೊಪ್ಪ ಗ್ರಾಮದಲ್ಲಿ ಓರ್ವ ಮಹಿಳೆಯನ್ನು ಉಸಿರು ಗಟ್ಟಿಸಿ ಕೊಲೆ ಮಾಡಿದ ಘಟನೆ ನಡೆದಿದೆ.
ಮೃತ ಮಹಿಳೆಯನ್ನು ಸುಮಂಗಲಾ ಪ್ರವೀಣ ತಿಪ್ಪಣ್ಣವರ (30) ಎಂದು ಗುರುತಿಸಲಾಗಿದೆ. ಸುಮಂಗಲಾ ಅವರ ಪತಿ ಪ್ರವೀಣ ಬಸವಣ್ಣೆಪ್ಪ ತಿಪ್ಪಣ್ಣವರ (35), ಬಸವಣ್ಣೆಪ್ಪ ತಿಪ್ಪಣ್ಣವರ (65), ಚನ್ನವ್ವ ತಿಪ್ಪಣ್ಣವರ (55), ಮಹೇಶ ತಿಪ್ಪಣ್ಣವರ (38) ಈ ನಾಲ್ವರು ಆರೋಪಿಗಳನ್ನು ಕಲಘಟಗಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಹಿಳೆಯನ್ನು ಕೊಲೆ ಮಾಡಿ, ಬಳಿಕ ಅನುಮಾನ ಬರಬಾರದು ಎಂದು ನೇಣು ಹಾಕಿದ್ದರು. ಈ ಬಗ್ಗೆ ಕುಟುಂಬದವರು ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಿದ್ದಾರೆ.
‘ಪ್ರವೀಣ ತಿಪ್ಪಣ್ಣವರ ಮತ್ತು ಅವರ ಕುಟುಂಬದವರ ಮೇಲೆ ವರದಕ್ಷಿಣೆ ಕಿರುಕುಳದ ದೂರು ಕಲಘಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.