ಉಡುಪಿ: ಕಳೆದ ನಾಲ್ಕೈದು ದಿನಗಳಿಂದ ಮಲ್ಪೆ ಬೀಚ್ ನಲ್ಲಿ ಟಾರ್ ಬಾಲ್ ಗಳು ಕಂಡು ಬರುತ್ತಿವೆ. ಅಲೆಗಳ ಅಬ್ಬರದೊಂದಿಗೆ ದಡ ಸೇರಿರುವ ಕಪ್ಪು ಬಣ್ಣದ ಟಾರ್ ಬಾಲ್‌ಗಳು ಸ್ಥಳೀಯರು ಹಾಗೂ ಪ್ರಕೃತಿ ಪ್ರಿಯರಲ್ಲಿ ಆತಂಕ ಮೂಡಿಸಿದೆ.
ಟಾರ್ ಚೆಂಡುಗಳು ಮಲ್ಪೆ, ಕೋಲ ಮತ್ತು ತೊಟ್ಟಂ ಸಮುದ್ರ ತೀರದಲ್ಲಿ ಹರಡಿಕೊಂಡಿವೆ. ಇದರಿಂದ ನೀರಿನಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾಗಿ ಸಮುದ್ರ ಜೀವಿಗಳಿಗೆ ಉಸಿರಾಟದ ಸಮಸ್ಯೆ ಉಂಟಾಗುತ್ತಿದೆ. ಕಚ್ಚಾ ತೈಲವು ಸಮುದ್ರದಲ್ಲಿ ಸೋರಿಕೆಯಾದಾಗ, ಗಾಳಿ ಮತ್ತು ಅಲೆಗಳ ಕಾರಣದಿಂದಾಗಿ ಅದು ಚೆಂಡುಗಳಾಗಿ ರೂಪುಗೊಳ್ಳುತ್ತದೆ.
ಟಾರ್ ಬಾಲ್‌ಗಳು ಮೀನುಗಳಿಗೆ ಅಪಾಯಕಾರಿ ಎಂದು ಮೀನುಗಾರರು ಹೇಳುತ್ತಾರೆ.
Photo Credit- Twitter