Site icon newsroomkannada.com

ಮೂರು ಬೈಕ್‍ಗಳು ಮುಖಮುಖಿ ಡಿಕ್ಕಿ: ಯುವಕ ಸಾವು

Youth killed as three bikes collide head-on

ಕುಂದಾಪುರ: ಕೋಡಿ ಕನ್ಯಾಣ ಅಂಗನವಾಡಿ ಸಮೀಪ ಮೂರು ಬೈಕ್‍ಗಳು ಮುಖಮುಖಿಯಾಗಿ ಡಿಕ್ಕಿ ಸಂಭವಿಸಿ ಓರ್ವ ಯುವಕ ಮೃತಪಟ್ಟು ಇಬ್ಬರು ಗಂಭೀರ ಗಾಯಗೊಂಡ ಘಟನೆ ಭಾನುವಾರ ರಾತ್ರಿ ನಡೆದಿದೆ. ಮೃತಪಟ್ಟ ಯುವಕ ಪಾರಂಪಳ್ಳಿಯ ರವಿಯಾನೆ ರವೀಂದ್ರ ಪೂಜಾರಿ(30) ಎಂದು ಗುರುತಿಸಲಾಗಿದೆ.

ಕೋಡಿ ಕನ್ಯಾಣದಿಂದ ಪಾರಂಪಳ್ಳಿಗೆ ಹೋಗುತ್ತಿದ್ದ ಎರಡು ಬೈಕ್‍ಗಳು ಪಾರಂಪಳ್ಳಿಯಿಂದ ಬರುತ್ತಿದ್ದ ಬೈಕ್‍ಗೆ ಮುಖಮುಖಿ ಡಿಕ್ಕಿ ಸಂಭವವಿಸಿದ ಹಿನ್ನಲ್ಲೆಯಲ್ಲಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಅಲ್ಲದೆ ಅಪಘಾತ ನಡೆದ ಸ್ಥಳದ ವಿರುದ್ದ ದಿಕ್ಕಿನಲ್ಲಿ ಯಾವುದೇ ಪಾರ್ಕಿಂಗ್ ಸಿಗ್ನಲ್ ಇಲ್ಲದೆ ರಸ್ತೆ ಬದಿಯಲ್ಲಿ ಕಾರೊಂದು ಪಾರ್ಕಿಂಗ್ ಮಾಡಿದ್ದು ಬೈಕ್ ಸವಾರರಿಗೆ ಮುಂದೆ ಬರುತ್ತಿದ್ದ ಬೈಕ್ ಕಾಣಿಸದೆ ಇರುವುದರಿಂದ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಈ ಅಪಘಾತದ ತೀವ್ರತೆಯು ಬೈಕ್ ಮುಖಮುಖಿ ಡಿಕ್ಕಿಯಾಗಿ ನಿಂತ ಕಾರಿಗೆ ಅಪ್ಪಳಿಸಿ ಬೈಕ್ ಸವಾರರು ಗಂಭೀರ ಗಾಯಗೊಂಡರು. ಮೃತ ಯುವಕ ಕೋಟ ಮೂರಕೈ ಸಮೀಪ ಟೂ-ವೀಲರ್ ಗ್ಯಾರೇಜ್ ಹೊಂದಿದ್ದಾರೆ. ಇನ್ನು ಗಂಭೀರ ಗಾಯಗೊಂಡ ಸ್ಥಳೀಯ ಚರಣ್ ಹಾಗೂ ಪ್ರಶಾಂತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version