ಉಳ್ಳಾಲ: ಉಳ್ಳಾಲ ದರ್ಗಾಕ್ಕೆ ಭೇಟಿ ನೀಡುವ ಸಲುವಾಗಿ ಚಿಕ್ಕಮಗಳೂರಿನಿಂದ ಬಂದಿದ್ದ ಮೂವರು ಯುವಕರ ಪೈಕಿ ಓರ್ವ ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ್ದು, ಮತ್ತೊಬ್ಬ ನಾಪತ್ತೆಯಾಗಿದ್ದಾನೆ.
ಚಿಕ್ಕಮಗಳೂರಿನಿಂದ ಉಳ್ಳಾಲ ದರ್ಗಾಕ್ಕೆ ಭೇಟಿ ನೀಡುವ ಸಲುವಾಗಿ ಬಶೀರ್ (23), ಸಲ್ಮಾನ್ (19), ಸೈಫ್ ಅಲಿ ಎಂಬ ಮೂವರು ಯುವಕರು ಬಂದಿದ್ದು, ಈ ವೇಳೆ ಬಶೀರ್, ಸಲ್ಮಾನ್, ಸೈಫ್ ಅಲಿ ನೀರಾಟದಲ್ಲಿ ತೊಡಗಿದ್ದು, ಮೂವರನ್ನು ಸಮುದ್ರದ ಅಲೆಗಳು ಎಳೆದೊಯ್ದಿದೆ. ಇವರ ರಕ್ಷಣೆಗೆ ಸ್ಥಳೀಯರು ಹೋಗಿದ್ದು ಸೈಫ್ ಅಲಿ ಮತ್ತು ಸಲ್ಮಾನ್ ನನ್ನು ಪಕ್ಕದಲ್ಲಿರುವವರು ನೀರಿನಿಂದ ಎಳೆದು ತಂದು, ಸಲ್ಮಾನ್ನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಸೈಫ್ ಅಲಿ ಚೇತರಿಸಿಕೊಂಡಿರುತ್ತಾನೆ. ಬಶೀರ್ ಎಂಬವನು ನೀರಿನಲ್ಲಿ ಮುಳುಗಿದ್ದು ಇದುವರೆಗೂ ಅವನ ಶರೀರ ಸಿಕ್ಕಿರುವುದಿಲ್ಲ ಸಲ್ಮಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ.