ಕೋಟ: ಕೃಷಿಕೆಲಸ ಮುಗಿಸಿ ಕೈಕಾಲು ತೊಳೆಯಲು ಇಳಿದಿದ್ದ ಯುವಕನೊಬ್ಬ ಕಾಲುಜಾರಿಬಿದ್ದು ಹೊಳೆಯಲ್ಲಿ ಮೃತಪಟ್ಟ ಘಟನೆ ಬೇಳೂರು ಗ್ರಾಮದಲ್ಲಿ ನಡೆದಿದೆ. ಸ್ಥಳೀಯ ನಿವಾಸಿ ಪ್ರಶಾಂತ ಆಚಾರ್ಯ (22) ಮೃತಪಟ್ಟ ಯುವಕ. ಇನ್ನು ಪ್ರಶಾಂತ ಆಚಾರ್ಯ ಅವರು ಸ್ನೇಹಿತರೊಂದಿಗೆ ತೋಟದ ಸಸಿ ಬುಡ ಮಾಡುವ ಕೆಲಸಕ್ಕಾಗಿ ತೆರಳಿದ್ದು, ಕೆಲಸ ಮುಗಿಸಿ ಸಂಜೆ 5:45ರ ಸುಮಾರಿಗೆ ಕೈಕಾಲು ತೊಳೆಯಲು ಕೊಮೆ ಹೊಳೆ ಆರ್ ಬೆಟ್ಟು ಗುಂಡಿ ಎಂಬಲ್ಲಿ ಇಳಿದಾಗ ಆಕಸ್ಮಿಕವಾಗಿ ಕಾಲುಜಾರಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಈ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.