ಮಂಗಳೂರು: ಮಂಗಳೂರಿನ ಪಂಪ್ ವೆಲ್ ನಲ್ಲಿ ಪಾರಿವಾಳ ರಕ್ಷಿಸಲು ಹೋದ ಯುವಕರಿಗೆ ವಿದ್ಯುತ್ ಸ್ಪರ್ಶವಾದ ಘಟನೆ ನಡೆದಿದೆ. ವಿದ್ಯುತ್ ತಂತಿ ಮೇಲೆ ಸಿಕ್ಕಿಹಾಕಿಕೊಂಡಿದ್ದ ಎರಡು ಪಾರಿವಾಳಗಳು ಒದ್ದಾಡುತ್ತಿದ್ದವು.
ಇದನ್ನು ನೋಡಿದ ಯುವಕರು ಪಾರಿವಾಳಗಳನ್ನು ಏಣಿ ಮತ್ತು ಕೋಲಿನ ಸಹಾಯದಿಂದ ರಕ್ಷಿಸಲು ಮುಂದಾಗಿದ್ದಾರೆ. ಒಂದು ಪಾರಿವಾಳವನ್ನು ರಕ್ಷಣೆ ಮಾಡಿದ್ದು, ಮತ್ತೊಂದು ಪಾರಿವಾಳವನ್ನು ರಕ್ಷಿಸುವ ವೇಳೆ ಯುವಕರಿಗೆ ವಿದ್ಯುತ್ ಶಾಕ್ ಹೊಡೆದಿದೆ. ತಕ್ಷಣ ಯುವಕರು ಕುಸಿದು ಬಿದ್ದಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.