ಬೆಳ್ತಂಗಡಿ: ಟ್ರೆಕ್ಕಿಂಗ್ ಗೆ ಬಂದಿದ್ದ ಯುವಕನೊಬ್ಬ ಸಾವನ್ನಪ್ಪಿದ ಘಟನೆ ನೇತ್ರಾವತಿ ಪೀಕ್ ಸ್ಪಾಟ್‌ನಲ್ಲಿ ನಡೆದಿದೆ. 27 ವರ್ಷದ ರಕ್ಷಿತ್ ಮೃತಪಟ್ಟ ಯುವಕ. ಮೈಸೂರು ಮೂಲದ 7 ಯುವಕರ ತಂಡ ಟ್ರೆಕ್ಕಿಂಗ್‌ಗಾಗಿ ಆಗಮಿಸಿದ್ದು, ಕುದುರೆಮುಖದಿಂದ ನೇತ್ರಾವತಿ ಪೀಕ್ ಸ್ಪಾಟ್ ಗೆ ತೆರಳಿದ್ದ ವೇಳೆ ಮಾರ್ಗಮಧ್ಯೆ ಹೃದಯಾಘಾತದಿಂದ ಸಾವನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಮೃತದೇಹವನ್ನು ಚಿಕ್ಕಮಗಳೂರು ಜಿಲ್ಲೆಯ ನೇತ್ರಾವತಿ ಪೀಕ್ ಸ್ಪಾಟ್‌ನಿಂದ ಕಳಸಕ್ಕೆ ಮೃತದೇಹವನ್ನು ಪೊಲೀಸರು ತಂದಿದ್ದಾರೆ.
ನೇತ್ರಾವತಿ ಪೀಕ್ ಸ್ಪಾಟ್‌ಗೆ ಟ್ರೆಕ್ಕಿಂಗ್ ಗೆ ಬಂದಿದ್ದ ಯುವಕ ಸಾವು
