ಬಂಟ್ವಾಳ: ಬಂಟ್ವಾಳ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಆಘಾತಕಾರಿ ಘಟನೆಯೊಂದು ಸಂಭವಿಸಿದ್ದು, ಜ್ವರವೆಂದು ಆಸ್ಪತ್ರೆಗೆ ಬಂದಿದ್ದ ಬಿಜೆಪಿ ಕಾರ್ಯಕರ್ತ ಪ್ರಕಾಶ್ ಬೆಳ್ಳೂರು (43) ವೈದ್ಯರು ಪರೀಕ್ಷೆ ನಡೆಸುವ ಮೊದಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಮೃತ ವ್ಯಕ್ತಿ ಬಿಜೆಪಿ ಅಮಾಡಿ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿಯಾಗಿದ್ದ ಪ್ರಕಾಶ್ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು, ಜನ ಕಡಿಮೆಯಾಗದ ಕಾರಣ ಸೋಮವಾರ ಬೆಳಗ್ಗೆ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಬಂದಿದ್ದರು.
ವೈದ್ಯರು ಪರೀಕ್ಷೆ ಮಾಡುವ ಮೊದಲೇ ಆಸ್ಪತ್ರೆಯಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಕೆಲವರು ಅವರಿಗೆ ನ್ಯುಮೋನಿಯಾ ಇತ್ತೆಂದು ಹೇಳುತ್ತಿದ್ದಾರೆ. ನುಮೋನಿಯಾದಿಂದ ಹರಾತ್ ನಾವು ಸಂಭವಿಸುವುದು ತೀರಾ ಕಡಿಮೆ, ದಂಗು, ಜ್ವರ ಈಗ ಎಲ್ಲ ಕಡೆ ಇರುವುದರಿಂದ ಅದೇ ಕಾರಣವೇ ಎಂಬ ಬಗ್ಗೆ ಮಾಹಿತಿ ಇಲ್ಲ. ಡೆಂಗ್ಯು ಜ್ವರದಲ್ಲಿ ಪ್ಲೇಟ್ ಲೆಟ್ ದಿಢೀರ್ ಕಡಿಮೆಯಾಗುವುದರಿಂದ ಚಿಕಿತ್ಸೆ ಸಿಗದೇ ಇದ್ದಲ್ಲಿ ಸಾವು ಸಂಭವಿಸುತ್ತದೆ ಹಾಗಾಗಿ ಈಗಿನ ಜ್ವರದ ಬಗ್ಗೆ ನಿರ್ಲಕ್ಷ್ಯ ಮಾಡಬಾರದು ಎಂದು ವೈದ್ಯರು ಹೇಳುತ್ತಾರೆ, ಯಾವುದೇ ಅಕಾಲಿಕ ಸಾವು ಆದರೂ ಜಿಲ್ಲಾ ಆರೋಗ್ಯ ಇಲಾಖೆ ಪರೀಕ್ಷೆ ನಡೆಸಬೇಕು. ಆದರೆ ಆರೋಗ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಖಚಿತವಾಗಿ ಪರೀಕ್ಷೆ ನಡೆಸುವುದಕ್ಕೆ ಹೋಗಲ್ಲ.