Site icon newsroomkannada.com

ಲವ್‌ ಮಾಡಿ ಕೈ ಕೊಟ್ಟ ಯುವಕನ ವಿರುದ್ಧ ದೂರು

ಬೆಂಗಳೂರಿನ ನೆಲಗದರನಹಳ್ಳಿ ಹಾಗೂ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಯುವತಿ ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾಗಿದ್ದು, ಬಳಿಕ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ ಬಳಿಕ ಬೆಂಗಳೂರಿನ ನೆಲಗದರನಹಳ್ಳಿ ಮೂಲಕ ಗಜೇಂದ್ರ, ಮದುವೆಯಾಗುವುದಾಗಿ ಎರಡು ವರ್ಷಗಳಿಂದ ಯುವತಿಯನ್ನು ಕರೆದುಕೊಂಡು ಎಲ್ಲೊಂದರಲ್ಲಿ ಸುತ್ತಾಡಿದ್ದಾನೆ. ಆದ್ರೆ, ಇದೀಗ ಮದುವೆ ಮುಹೂರ್ತ ಸಮೀಪಿಸುತ್ತಿದ್ದಂತೆಯೇ ಗಜೇಂದ್ರ ಎಸ್ಕೇಪ್ ಆಗಿದ್ದಾನೆ. ಹೌದು…ಬೆಂಗಳೂರಿನ ಪಿಣ್ಯಾದ ದುಗ್ಗಾಲಮ್ಮ ದೇವಾಲಯದಲ್ಲಿ ಇಬ್ಬರ ಮದುವೆ ಫಿಕ್ಸ್ ಆಗಿತ್ತು. ಆದ್ರೆ, ಗಜೇಂದ್ರ ಮದುವೆಯಾಗಲು ಹೋಗುತ್ತಿದ್ದಾಗ ಮಾರ್ಗಮಧ್ಯೆಯೇ ಪರಾರಿಯಾಗಿದ್ದಾನೆ.

ಈ ಮೊದಲೇ ಇವರಿಬ್ಬರ ಪ್ರೀತಿ ಪೊಲೀಸ್​ ಠಾಣೆ ಮೆಟ್ಟಿಲೇರಿತ್ತು. ಯುವತಿಯನ್ನು ಮದುವೆಯಾಗುವಂತೆ ಗಜೇಂದ್ರನಿಗೆ ಪೊಲೀಸರು ಬುದ್ಧಿ ಹೇಳಿದ್ದರು.ಇದಕ್ಕೆ ಠಾಣೆಯಲ್ಲಿ ಗಜೇಂದ್ರ, ಯುವತಿಯನ್ನು ಮದುವೆಯಾಗುವುದಾಗಿ ಒಪ್ಪಿಕೊಂಡು ಮುಚ್ಚಳಿಕೆ ಪತ್ರವನ್ನೂ ಸಹ ಬರೆದುಕೊಟ್ಟಿದ್ದ. ಆದ್ರೆ, ತುಮಕೂರಿನಿಂದ ಬೆಂಗಳೂರಿನ ಪಿಣ್ಯಾದ ದುಗ್ಗಾಲಮ್ಮ ದೇವಾಲಯ ಬಳಿಗೆ ಮದುವೆಯಾಗಲು ಹೋಗುತ್ತಿದ್ದಾಗ ನೆಲಗದರನಹಳ್ಳಿ ಬಳಿ ಕಾರು ಇಳಿದು ಎಸ್ಕೇಪ್ ಆಗಿದ್ದಾನೆ.

ನನ್ನ ಪ್ರಾಣ ಎಂದು ಹೋಟೆಲ್ ಲಾಡ್ಜ್ ಗೆ ಕರೆದೊಯ್ದು ಲೈಂಗಿಕವಾಗಿ ಬಳಸಿಕೊಂಡಿದ್ದ. ಎರಡೂವರೆ ವರ್ಷಗಳಿಂದ ಪ್ರೀತಿಸಿ ಇದೀಗ ಏಕಾಏಕಿ ಮನೆಯಲ್ಲಿ ಒಪ್ಪುತ್ತಿಲ್ಲ ಬೇಡ ಎಂದು ಕೈಕೊಟ್ಟಿದ್ದಾನೆ ಎಂದು ಯುವತಿ ಅಳಲು ತೋಡಿಕೊಂಡಿದ್ದಾಳೆ. ಈ ಬಗ್ಗೆ ಗಜೇಂದ್ರನ ವಿರುದ್ಧ ಕ್ರಮ ಕೈಗೊಳ್ಳುವಂತೆ ಮತ್ತೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.

Exit mobile version