ಬಂಟ್ವಾಳ: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಅವರ ಆಶಯದಂತೆ ‘ಯಕ್ಷಧ್ರುವ-ಯಕ್ಷ ಶಿಕ್ಷಣ’ ಅಭಿಯಾನದಡಿಯಲ್ಲಿ ಆ.26 ಶನಿವಾರದಂದು ಬಂಟ್ವಾಳ ತಾಲೂಕಿನ ಕೊಯಿಲ ಸರಕಾರಿ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಯಕ್ಷ ತರಬೇತಿಯ ಉದ್ಘಾಟನೆ ನಡೆಯಿತು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದರಾದ ಸರಪಾಡಿ ಅಶೋಕ ಶೆಟ್ಟಿ ಕಾರ್ಯಕ್ರಮ ವನ್ನು ಉದ್ಘಾಟಿಸಿದರು. ಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ದುರ್ಗಾದಾಸ್ ಶೆಟ್ಟಿ ಮಾವಂತೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸದಸ್ಯ ಹಿಲಾರಿ ಡಿಸೋಜ, ರಂಗಭೂಮಿ ಕಲಾವಿದ ರತ್ನದೇವ್ ಪುಂಜಾಲಕಟ್ಟೆ,ಶಿಕ್ಷಕರಾದ ಧನಂಜಯ, ಜ್ಯೋತಿ, ಆಶಾಲತಾ, ಪ್ರಶ್ಮಿತ, ಸುಶ್ಮಿತ ಅವರು ಉಪಸ್ಥಿತರಿದ್ದರು.
ಯಕ್ಷ ಗುರು ಪ್ರೇಮರಾಜ್ ಕೊಯಿಲ ಅವರು ವಿದ್ಯಾರ್ಥಿಗಳಿಗೆ ಯಕ್ಷಗಾನ ನಾಟ್ಯ ತರಗತಿ ಪ್ರಾರಂಭಿಸಿದರು. ಈ ಯಕ್ಷಗಾನ ತರಬೇತಿಯಲ್ಲಿ ಒಟ್ಟು 83 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಸೌಮ್ಯಾ ಎಚ್. ಸ್ವಾಗತಿಸಿದರು, ಸಹ ಶಿಕ್ಷಕರಾದ ಪ್ರವೀಣ್ ಕಾಮತ್ ವಂದಿಸಿದರು, ರಮೇಶ್ ಮಯ್ಯ ಕಾರ್ಯಕ್ರಮ ನಿರೂಪಿಸಿದರು.