main logo

ವಾಕಿಂಗ್‌ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದ ಮಹಿಳೆ ಬ್ರಿಡ್ಜ್ ಮೇಲಿಂದ ಹಾರಿದಳು

ವಾಕಿಂಗ್‌ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದ ಮಹಿಳೆ ಬ್ರಿಡ್ಜ್ ಮೇಲಿಂದ ಹಾರಿದಳು

ಬೆಂಗಳೂರು: ಬೆಂಗಳೂರಿನಲ್ಲಿ ಘೋರ ಅನಾಹುತವೊಂದು ನಡೆದುಹೋಗಿದೆ. ಎಲೆಕ್ಟ್ರಾನಿಕ್ ಸಿಟಿ ಸಮೀಪದ ಚಿಕ್ಕತೋಗೂರು ಬ್ರಿಡ್ಜ್ ಮೇಲಿಂದ ಹಾರಿ ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಓಮಿಕಾ ಮಿಶ್ರ (28) ಆತ್ಮಹತ್ಯೆಗೆ ಯತ್ನಿಸಿದವರು. ಜರ್ಖಾಂಡ್ ಮೂಲದ ಓಮಿಕಾ ಮಿಶ್ರ, ವಾಕಿಂಗ್‌ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದಾರೆ. ಆದರೆ ನೈಸ್ ರಸ್ತೆಯ ಬ್ರಿಡ್ಜ್ ಬಳಿ ಬಂದವಳೇ ಏಕಾಏಕಿ ಮೇಲಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಬ್ರಿಡ್ಸ್‌ ಮೇಲಿಂದ ಬಿದ್ದ ರಭಸಕ್ಕೆ ಮುಖಕ್ಕೆ ಗಂಭೀರವಾಗಿದ್ದು, ಕೈ-ಕಾಲು ಮೂಳೆಗಳು ಮುರಿದಿದೆ. ಮಹಿಳೆಯ ಸ್ಥಿತಿ ಚಿಂತಾಜನಕವಾಗಿದ್ದು, ಬೆಂಗಳೂರಿನ ಖಾಸಗಿ‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಓಮಿಕಾ ಮಿಶ್ರ ಪತಿ ಟೆಕ್ ಮಹೇಂದ್ರ ಕಂಪನಿಯ ಉದ್ಯೋಗಿ ಎಂದು ತಿಳಿದು ಬಂದಿದೆ. ಕೌಟುಂಬಿಕ ಕಲಹದಿಂದ ಆತ್ಮಹತ್ಯೆಗೆ ಯತ್ನಿಸಿರುವ ಶಂಕೆ ವ್ಯಕ್ತವಾಗಿದೆ. ಎಲೆಕ್ಟ್ರಾನಿಕ್ಸ್‌ ಸಿಟಿ ಪೊಲೀಸ್‌ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

Related Articles

Leave a Reply

Your email address will not be published. Required fields are marked *

error: Content is protected !!