main logo

ಹೆಂಡತಿಯನ್ನು ಗರ್ಭಿಣಿಯಾಗಿಸಲು ಆತ ಮಾಡಿದ ವಿಚಿತ್ರ ಪ್ರಯೋಗ

ಹೆಂಡತಿಯನ್ನು ಗರ್ಭಿಣಿಯಾಗಿಸಲು ಆತ ಮಾಡಿದ ವಿಚಿತ್ರ ಪ್ರಯೋಗ

ಯಾವಾಗಲೂ ರಹಸ್ಯವಾಗಿಡುವಂತೆ ನ್ಯಾಯಾಧೀಶರು ತಿಳಿಸಿದ ಆ ಪ್ರಕರಣ ಯಾವುದು
ಇಲ್ಲಿದೆ ನೋಡಿ ಪ್ರಕರಣದ ಕಂಪ್ಲೀಟ್‌ ಕಹಾನಿ
ಲಂಡನ್: ಹೆಂಡತಿಯನ್ನು ಗರ್ಭಿಣಿಯಾಗಿಸಲು ವ್ಯಕ್ತಿ, ತನ್ನ ತಂದೆಯ ವೀರ್ಯದೊಂದಿಗೆ ತನ್ನ ವೀರ್ಯವನ್ನು ಬೆರೆಸಿರುವ ಘಟನೆ ಲಂಡನ್‌ನಲ್ಲಿ ನಡೆದಿದೆ. ಐವಿಎಫ್‌ ಚಿಕಿತ್ಸೆಯ ವೆಚ್ಚ ಭರಿಸಲಾಗದ ಕಾರಣ ವ್ಯಕ್ತಿ, ತನ್ನ ಸ್ವಂತ ವೀರ್ಯವನ್ನು ತಂದೆಯ ವೀರ್ಯದೊಂದಿಗೆ ಮಿಕ್ಸ್ ಮಾಡಿದ್ದಾನೆ. ಕಾನೂನು ಕಾರಣಗಳಿಗಾಗಿ ವ್ಯಕ್ತಿ ಯಾರೆಂದು ಬಹಿರಂಗಪಡಿಸಲಾಗಿಲ್ಲ. ನ್ಯಾಯಾಲಯದ ದಾಖಲೆಗಳಲ್ಲಿ ಈತನನ್ನು PQ ಎಂದು ಮಾತ್ರ ಗುರುತಿಸಲಾಗಿದೆ.

ವ್ಯಕ್ತಿ ಮತ್ತು ಆತನ ಪತ್ನಿ ಮಕ್ಕಳಾಗದೆ ಸಮಸ್ಯೆ ಅನುಭವಿಸುತ್ತಿದ್ದರು. ಇವರಿಗೆ ಫರ್ಟಿಲಿಟಿ ಸಮಸ್ಯೆ ಇರೋ ಕಾರಣ ಮಕ್ಕಳಾಗೋ ಸಾಧ್ಯತೆ ಕಡಿಮೆ ಎಂದು ವೈದ್ಯರು ತಿಳಿಸಿದ್ದರು. ಅದ್ದರಿಂದ ವ್ಯಕ್ತಿ ತನ್ನ ವೀರ್ಯವನ್ನು ತಂದೆಯ ವೀರ್ಯದೊಂದಿಗೆ ಮಿಕ್ಸ್ ಮಾಡಿಕೊಂಡಿದ್ದಾನೆ. ನಂತರ ಇದನ್ನು ಮಹಿಳೆಗೆ ಚುಚ್ಚಲಾಯಿತು. ‘ಯಾವಾಗಲೂ ರಹಸ್ಯವಾಗಿಡಲು ಉದ್ದೇಶಿಸಲಾಗಿದೆ’ ಎಂದು ನ್ಯಾಯಾಧೀಶ ತಿಳಿಸಿದ್ದರು. ಈ ಮಗುವಿಗೆ ಈಗ ಐದು ವರ್ಷವಾಗಿದೆ ಎಂದು ತಿಳಿದುಬಂದಿದೆ. ಕೋರ್ಟ್‌ ದಾಖಲೆಗಳಲ್ಲಿ ಈತನನ್ನು ‘ಡಿ’ ಎಂದು ಹೆಸರಿಸಲಾಗಿದೆ. \

ಆದರೆ ಇದರ ಬಗ್ಗೆ ಸ್ಥಳೀಯ ಮಂಡಳಿಗೆ ತಿಳಿಸಿದಾಗ, ಮಗುವಿನ ಪೋಷಕರನ್ನು ಹುಡುಕಲು ಕಾನೂನು ಬಿಡ್‌ನ್ನು ಪ್ರಾರಂಭಿಸಿತು. ಆ ವ್ಯಕ್ತಿ ಡಿ ಅವರ ತಂದೆಯೇ ಎಂಬುದನ್ನು ನಿರ್ಧರಿಸಲು ಡಿಎನ್‌ಎ ಪರೀಕ್ಷೆಯನ್ನು ನಡೆಸುವಂತೆ ಆ ವ್ಯಕ್ತಿಗೆ ನಿರ್ದೇಶಿಸುವಂತೆ ಒತ್ತಾಯಿಸಿ ಮಂಡಳಿ ಹೈಕೋರ್ಟ್‌ಗೆ ಮೊರೆ ಹೋಗಿತ್ತು. ಆದರೆ, ನ್ಯಾಯಾಧೀಶರು ಗುರುವಾರ ಬಿಡ್ ಅನ್ನು ವಜಾಗೊಳಿಸಿದರು,

‘ಡಿ ಅವರ ಜೈವಿಕ ತಂದೆ ಯಾರೆಂದು ತಿಳಿಯಲು ಬಯಸಬಹುದು, ಆದರೆ ಅದರ ಅನ್ವಯದ ಫಲಿತಾಂಶದಲ್ಲಿ ಯಾವುದೇ ಪಾಲನ್ನು ಹೊಂದಿಲ್ಲ. ಜನನಗಳ ನಿಖರವಾದ ದಾಖಲೆಗಳನ್ನು ನಿರ್ವಹಿಸುವಲ್ಲಿ ಸಾರ್ವಜನಿಕ ಹಿತಾಸಕ್ತಿಗಳನ್ನು ಎತ್ತಿಹಿಡಿಯುವ ಬಯಕೆಯು ಅಂತಹ ಅರ್ಜಿಯ ನಿರ್ಣಯದಲ್ಲಿ ವೈಯಕ್ತಿಕ ಆಸಕ್ತಿಯನ್ನು ನೀಡುವುದಿಲ್ಲ’ ಎಂದು ನ್ಯಾಯಾಧೀಶರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಮಗುವಿಗೆ ತನ್ನ ನಿಜವಾದ ತಂದೆಯ ಬಗ್ಗೆ ಹೇಳಲು ಅವರು ಪಿತೃತ್ವ ಪರೀಕ್ಷೆಗೆ ಒಳಗಾಗಲು ಬಯಸುತ್ತಾರೆಯೇ ಎಂಬ ನಿರ್ಧಾರವು ಕುಟುಂಬಕ್ಕೆ ಸೇರಿದ್ದು ಎಂದು ನ್ಯಾಯಾಧೀಶರು ತಿಳಿಸಿದರು.

Related Articles

Leave a Reply

Your email address will not be published. Required fields are marked *

error: Content is protected !!