ಕಾಸರಗೋಡು: ಯುವತಿಯೊಬ್ಬಳು ರೈಲಿ ನಿಂದ ಬಿದ್ದು ಮೃತ ಪಟ್ಟ ಘಟನೆ ಪಳ್ಳಿ ಕೆರೆ ಯಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಘಟನೆಯಲ್ಲಿ ಕಲ್ಪಟ್ಟ ಕಾವುಮಂದದ ಐಶ್ವರ್ಯ ಜೋಸೆಫ್ (30) ಮೃತಪಟ್ಟವರು.
ಪಳ್ಳಿಕೆರೆ ಮಾಸ್ತಿ ಗುಡ್ಡೆ ಯ ರೈಲ್ವೆ ಹಳಿ ಸಮೀಪ ಮೃತ ದೇಹಪತ್ತೆ ಯಾಗಿದೆ. ರಾತ್ರಿ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಬೆಳಿಗ್ಗೆ ಪರಿಸರವಾಸಿಗಳು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದರು.
ಮೃತ ದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಮೃತ ದೇಹದ ಬಳಿ ಲಭಿಸಿದ ಪರ್ಸ್ ನಲ್ಲಿದ್ದ ಗುರುತು ಚೀಟಿಯಿಂದ ಯುವತಿಯ ಗುರುತು ಪತ್ತೆ ಹಚ್ಚಲಾಯಿತು. ಕೋಜಿಕ್ಕೊಡ್ ನ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದಳು. ಉದ್ಯೋಗ ದ ನಿಮಿತ್ತ ನೇತ್ರಾವತಿ ರೈಲಿನಲ್ಲಿ ಮಂಗಳೂರಿಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.