Site icon newsroomkannada.com

ಬಂಟ್ವಾಳ: ಖಾಸಗಿ ಬಸ್ ಚಲಿಸುತ್ತಿದ್ದಾಗಲೇ ಹೊರಕ್ಕೆ ಬಿದ್ದ ವೃದ್ಧ ಮಹಿಳೆ ಸಾವು

ಬಂಟ್ವಾಳ: ಚಲಿಸುತ್ತಿದ್ದ ಬಸ್​ನಿಂದ ರಸ್ತೆಗೆ ಬಿದ್ದು ಮಹಿಳೆ ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಾಣಿ‌ ಎಂಬಲ್ಲಿ ನಡೆದಿದೆ. ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ನಿನ್ನಿಕಲ್ ನಿವಾಸಿ ರಾಧ(66) ಮೃತ ಮಹಿಳೆ. ಮಗುವನ್ನು ಹಿಡಿದುಕೊಂಡು ಬಸ್ ಹತ್ತಿದ ಮಹಿಳೆಗೆ ಸೀಟು ಬಿಟ್ಟುಕೊಟ್ಟಿದ್ದ ಮೃತ ರಾಧಾ ಅವರು, ಬಸ್​ನ ಸರಳು ಹಿಡಿಯುವ ವೇಳೆ ಕೈ ಜಾರಿ ಬಸ್​ನಿಂದ ಹೊರಗೆ ಬಿದ್ದು ಗಾಯವಾಗಿತ್ತು, ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದಾರೆ. ಮಹಿಳೆ ಬಸ್‌ನಿಂದ ಹೊರಗೆಬಿದ್ದ ಭಯಾನಕ ದೃಶ್ಯ ಬಸ್​ಗೆ ಅಳವಡಿಸಿದ್ದ ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಕುರಿತು ಬಸ್ ಚಾಲಕ ಹಾಗೂ ನಿರ್ವಾಹಕನ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Exit mobile version