ಬೆಂಗಳೂರು: ಯುವತಿಯೊಬ್ಬಳು ತನ್ನ ಲಿವ್ ಇನ್ ಸಂಗಾತಿಯನ್ನು ಚಾಕುವಿನಿಂದ ಇರಿದು ಕೊಂದ ಘಟನೆ ಬೆಂಗಳೂರಿನಲ್ಲಿ ನೆಡೆದಿದೆ. ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ಈ ಘಟನೆ ನಡೆದಿದೆ.
ಮಹಿಳೆಯನ್ನು ಬೆಳಗಾವಿ ಮೂಲದ ರೇಣುಕಾ (24) ಎಂದು ಗುರುತಿಸಲಾಗಿದ್ದು, ಮೃತಪಟ್ಟ ಯುವಕನನ್ನು ಕೇರಳ ಮೂಲದ ಜಾವೇದ್ (29) ಎಂದು ಗುರುತಿಸಲಾಗಿದೆ. ಪೋಲೀಸರ ಪ್ರಕಾರ, ಸೆಲ್ ಫೋನ್ ರಿಪೇರಿ ಮಾಡುತ್ತಿದ್ದ ರೇಣುಕಾ ಮತ್ತು ಜಾವೇದ್ ಅಕ್ಷಯನಗರದ ಸರ್ವಿಸ್ ಅಪಾರ್ಟ್ ಮೆಂಟ್ ನಲ್ಲಿ ಒಟ್ಟಿಗೆ ವಾಸವಿದ್ದರು. ಇಬ್ಬರೂ ಆಗಾಗ್ಗೆ ಜಗಳವಾಡುತ್ತಿದ್ದರು. ಮಂಗಳವಾರ ಯಾವುದೋ ವಿಷಯಕ್ಕೆ ಜಗಳವಾಡುತ್ತಿದ್ದರು. ಈ ವೇಳೆ ಕೋಪದ ಭರದಲ್ಲಿ ರೇಣುಕಾ ಚಾಕುವಿನಿಂದ ಜಾವೇದ್ ಎದೆಗೆ ಇರಿದಿದ್ದಾಳೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ರೇಣುಕಾ ಅವರನ್ನು ವಶಕ್ಕೆ ಪಡೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳು ಇನ್ನಷ್ಟೇ ಹೊರಬರಬೇಕಿದೆ.