Site icon newsroomkannada.com

ತನಗಿಂತ 15 ವರ್ಷ ಹಿರಿಯ ವ್ಯಕ್ತಿಯೊಂದಿಗೆ ವಿವಾಹವಾದ ಯುವತಿ: ಈತ 4 ವರ್ಷದ ಬಾಲಕಿಯಿಂದಲೇ ಈ ಯುವತಿಯನ್ನು ಸಾಕಿದ್ದನಂತೆ

ನ್ಯೂಯಾರ್ಕ್ ನಲ್ಲಿ ಓರ್ವ ಯುವತಿ ತನಗಿಂತ 15 ವರ್ಷ ಹಿರಿಯ ವ್ಯಕ್ತಿಯೊಂದಿಗೆ ವಿವಾಹವಾಗಿದ್ದಾಳೆ. ಈತನೇ ಆಕೆಯನ್ನು 4 ವರ್ಷದ ಬಾಲಕಿಯಿಂದಲೇ ಸಾಕಿದ ವ್ಯಕ್ತಿ ಆಗಿದ್ದ ಆದ್ದರಿಂದ ಈ ವಿಚಾರ ಈಗ ಭಾರೀ ಚರ್ಚೆ ಆಗುತ್ತಿದೆ.

ಯುವತಿಯ ಹೆಸರು ಸಮಂತಾ ಗೀಸಾಲ್(29). ಈಕೆ 44 ವರ್ಷದ ವ್ಯಕ್ತಿಯನ್ನು ಮದುವೆಯಾಗಿದ್ದಾಳೆ. ಅವರ ನಡುವೆ 15 ವರ್ಷಗಳ ವಯಸ್ಸಿನ ಅಂತರವಿದೆ. ಈ ವ್ಯಕ್ತಿ ಸಮಂತಾಳನ್ನು ಕೇವಲ ನಾಲ್ಕು ವರ್ಷದ ಮಗುವಾಗಿದ್ದಾಗಿನಿಂದ ಸಾಕುತ್ತಿದ್ದಾನೆ. ಇತ್ತೀಚೆಗಷ್ಟೇ ಸಮಂತಾ ತಾನು ಚಿಕ್ಕವಳಾಗಿದ್ದಾಗ ಮತ್ತು ಇತ್ತೀಚೆಗೆ ಮದುವೆಯಾದ ಫೋಟೋಗಳನ್ನು ಸೋಶಿಯಲ್​ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾಳೆ. ಬಾಲ್ಯದ ಫೋಟೋದಲ್ಲಿ ಆಕೆಗೆ 4 ವರ್ಷ ಮತ್ತು ಆಕೆಯ ಪತಿಗೆ 19,ಮತ್ತು ಆತ ಸಮಂತಾಳನ್ನು ತನ್ನ ಮಡಿಲಲ್ಲಿ ಹೊತ್ತುಕೊಂಡಿರುವುದನ್ನು ಫೋಟೋದಲ್ಲಿ ಕಾಣಬಹುದು. ಎರಡನೇ ಫೋಟೋದಲ್ಲಿ ಅವರ ಮದುವೆಯ ಸಮಯದಲ್ಲಿ, ಸಮಂತಾಗೆ 29 ವರ್ಷ, ಪತಿಗೆ 44 ವರ್ಷವಿರುವುದನ್ನು ಕಾಣಬಹುದು. ಈಗ ಇವರಿಬ್ಬರ ವಿಚಿತ್ರ ಸಂಬಂಧವನ್ನು ನೆಟ್ಟಿಗರು ಕಾಮೆಂಟ್​​ ಮೂಲಕ ಟೀಕಿಸಿದ್ದಾರೆ.

Exit mobile version