ತಮಿಳುನಾಡು: ಮೊಬೈಲನ್ನು ಚಾರ್ಜ್ ಗೆ ಇಟ್ಟು ಮಾತನಾಡುತ್ತಿದ್ದ ವೇಳೆ ಮೊಬೈಲ್ ಸ್ಪೋಟಗೊಂಡು ಮಹಿಳೆ ಸಾವನಪ್ಪಿದ ಘಟನೆ ತಮಿಳುನಾಡಿನ ತಂಜಾವೂರಿನಲ್ಲಿ ನಡೆದಿದೆ.
ಮೃತ ಮಹಿಳೆ ಕೊಕಿಲಾಂಪಾಲ್ (33) ದುರಂತ ಅಂತ್ಯಕಂಡಿದ್ದಾಳೆ. ಮಹಿಳೆ ಮೊಬೈಲನ್ನು ಚಾರ್ಚ್‌ಗೆ ಇಟ್ಟು, ಫೋನ್ ಬಂತೆಂದು ಮಾತನಾಡಲು ಶುರು ಮಾಡಿದ್ದಾಳೆ. ಈ ಸಂದರ್ಭದಲ್ಲಿ ಕೆಲ ನಿಮಿಷಗಳ ಬಳಿಕ ಮೊಬೈಲ್ ಸ್ಪೋಟ ಗೊಂಡಿದೆ. ಇದರ ತೀವ್ರತೆಗೆ ಮಹಿಳೆ ಸಾವನಪ್ಪಿದ್ದಾಳೆ.
ಮೃತ ಮಹಿಳೆಯ ಪತಿ, ಕೆಲ ವರ್ಷಗಳ ಹಿಂದೆ ಕೊನೆಯುಸಿರೆಳೆದಿದ್ದರು. ಈಗ ಅಪ್ಪ-ಅಮ್ಮನನ್ನು ಕಳೆದುಕೊಂಡು ಗಂಡು ಮಗು ಅನಾಥವಾಗಿದೆ.