ನವದೆಹಲಿ: ದೆಹಲಿಯಲ್ಲಿ ಮೈತೈ ಸಮುದಾಯದವರು ಎನ್ನಲಾದ ಮಣಿಪುರದ ಒಬ್ಬ ಮಹಿಳೆ ಹಾಗೂ ಇಬ್ಬರು ವ್ಯಕ್ತಿಗಳ ಮೇಳೆ ಕುಕಿ ಸಮುದಾಯದವರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಏನಿದು ಘಟನೆ: ದೆಹಲಿಯ ಸನ್ಲೈಟ್ ಕಾಲೋನಿಯಲ್ಲಿ ಗುರುವಾರ (ನವೆಂಬರ್ 30) ರಾತ್ರಿ ಸುಮಾರು ಎಂಟರಿಂದ ಹತ್ತು ದುಷ್ಕರ್ಮಿಗಳು ಇಬ್ಬರು ಪುರುಷರು ಹಾಗೂ ಒಬ್ಬ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆ. ಅವರಿಗೆ ಒದ್ದು, ತುಳಿದು, ಹೊಡೆದು ಹಲ್ಲೆ ನಡೆಸಿದ್ದಾರೆ. ರಸ್ತೆ ಮೇಲೆಯೇ ಅವರನ್ನು ಎಳೆದಾಡಿ ಹಲ್ಲೆ ಮಾಡಿದ್ದಾರೆ.
ಈ ಎಲ್ಲೆಡೆ ವೈರಲ್ ಆಗಿದ್ದು, ಪೊಲೀಸ್ ತನಿಖೆ ಆರಂಭಿಸಲಾಗಿದೆ.
ನಾನು, ಪತ್ನಿ ಹಾಗೂ ನನ್ನ ಸಹೋದರಿಯು ಗುರುವಾರ ರಾತ್ರಿ 11 ಗಂಟೆ ಸುಮಾರಿಗೆ ಊಟದ ಬಳಿಕ ನಮ್ಮ ಕುಟುಂಬದ ಸ್ನೇಹಿತರೊಬ್ಬರನ್ನು ಬಿಡಲು ಹೋಗಿದ್ದೆವು. ಇದೇ ವೇಳೆ ಮೊಬೈಲ್ ಬ್ಯಾಟರಿ ಲೋ ಆಗಿ, ಸ್ವಿಚ್ಡ್ ಆಫ್ ಆದ ಕಾರಣ ಕ್ಯಾಬ್ ಬುಕ್ ಮಾಡಲು ಬೇರೆಯವರ ಸಹಾಯ ಬೇಡಿದೆವು. ಇದೇ ವೇಳೆ ನನ್ನ ಹೆಂಡತಿ ಹಾಗೂ ಸಹೋದರಿ ಕುರಿತು ಅಸಭ್ಯವಾಗಿ ಮಾತನಾಡಿದರು. ಇದರ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ನಮ್ಮ ಮೇಲೆ ಹಲ್ಲೆ ನಡೆಸಿದರು” ಎಂದು ಹಲ್ಲೆಗೀಡಾದ ವ್ಯಕ್ತಿ ತಿಳಿಸಿದ್ದಾರೆ.
Meitei people are no longer safe, even in the capital city of #Delhi . Two #Meiteis , including a woman, were assaulted by #Kuki mobs. The #GoI should address this matter with utmost seriousness; it cannot be overlooked or taken lightly. #Manipur #KukiAtrocities #KukiTerrorists pic.twitter.com/XVAOmSnzS3
— Christopher Hijam (@ChristopherHij2) December 2, 2023