Site icon newsroomkannada.com

ಕೆಲಸವೇ ಮಾಡದಿದ್ದರೂ ಈತನಿಗೆ ಸಿಗಲಿದೆ ತಿಂಗಳಿಗೆ 5 ಲಕ್ಷ ರೂ.

ದುಬೈ: ಅದೃಷ್ಟ ಎಂಬುದು ಯಾರಿಗೆ ಎಲ್ಲಿ, ಹೇಗೆ ಬರುತ್ತದೆ ಎಂಬುದು ಗೊತ್ತಿರುವುದಿಲ್ಲ. ಅದೇರೀತಿ 2018ರಿಂದ ದುಬೈನಲ್ಲಿ ಆರ್ಕಿಟೆಕ್ಟ್‌ ಆಗಿರುವ ಉತ್ತರ ಪ್ರದೇಶ ಲಕ್ನೊ ಮೂಲದ ಮೊಹಮ್ಮದ್ ಆದಿಲ್ ಖಾನ್ ಮುಂದಿನ 25 ವರ್ಷಗಳವರೆಗೆ ಪ್ರತಿತಿಂಗಳು ಕೆಲಸವನ್ನೇ ಮಾಡದೇ ಪ್ರತಿ ತಿಂಗಳು 5.5 ಲಕ್ಷಕ್ಕೂ ಹೆಚ್ಚು ಹಣವನ್ನು ಪಡೆಯುತ್ತಾರೆ.

ಇದು ಹೇಗೆ ಸಾಧ್ಯವಾಯಿತು: ಮೊಹಮ್ಮದ್ ಆದಿಲ್ ಖಾನ್ ದುಬೈನಲ್ಲಿ ರಾಫೆಲ್ ಡ್ರಾ ಕಂಪನಿಯ ಎಮಿರೇಟ್ಸ್ ಡ್ರಾ “ಗ್ರ್ಯಾಂಡ್  ಟಿಕೇಟ್‌ ಖರೀದಿ ಮಾಡಿದ್ದರು. ಕೆಲದಿನಗಳು ಕಳೆದ ಬಳಿಕ ಜಾಲತಾಣದಲ್ಲಿ ಎಮಿರೇಟ್ಸ್ ಡ್ರಾ ಜಾಹೀರಾತು ಕಾಣಸಿಕ್ಕಿತು. ಅದರಲ್ಲಿ  ಅವರು ಖರೀದಿಸಿದ ಟಿಕೇಟ್‌ಗೆ FAST5 ಗ್ರ್ಯಾಂಡ್ ಬಹುಮಾನ ದೊರೆತಿತ್ತು. ಆಗ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಈಗ ಅವರು ಭವಿಷ್ಯದ ಕನಸುಗಳಿಗೆ ಸ್ಪಷ್ಟ ರೂಪ ಕೊಡಲು ಚಿಂತಿಸುತ್ತಿದ್ದು, ಹಲವು ಯೋಜನೆಗಳನ್ನು ಹಾಕಿಕೊಂಡಿದ್ದಾರೆ.  ಅವರಿಗೆ  ಬ್ಯಾಂಕ್‌ ಖಾತೆಗೆ ಲಾಟರಿ ನಿಯಮಗಳ ಪ್ರಕಾರ ಮುಂದಿನ 25 ವರ್ಷಗಳ  ಪ್ರತಿ ತಿಂಗಳು 25,000 AED ಸಂದಾಯವಾಗಲಿದೆ.  ಈ ಹಣದಲ್ಲಿ ನಾನು ದುಬೈನಲ್ಲಿಯೇ ಮನೆ ಖರೀದಿಸಬೇಕೆಂದು ಯೋಚನೆ ಮಾಡಿದ್ದೇನೆ. ಅದೇ ರೀತಿ ಊರಿನಲ್ಲಿರುವ ಇಳಿವಯಸ್ಸಿನ ತಂದೆ ತಾಯಿಗಳನ್ನು ದುಬೈಗೆ ಕರೆತಂದು ತಮ್ಮೊಂದಿಗೆ ಇರಿಸಿಕೊಳ್ಳಲು ಪ್ಲ್ಯಾನ್‌ ಮಾಡಿಕೊಂಡಿದ್ದೇನೆ ಎಂದು ಖಾನ್‌ ತಿಳಿಸಿದ್ದಾರೆ.

Exit mobile version