Site icon newsroomkannada.com

ಬೆಂಗಳೂರಲ್ಲಿ ಮತ್ತೆ ವೈಫ್ ಸ್ವಾಪ್ ಸದ್ದು: ಪತಿ ವಿರುದ್ಧ ಪೊಲೀಸರ ಮೊರೆ ಹೋದ ಪತ್ನಿ ದೂರಿನಲ್ಲೇನಿದೆ?

ಬೆಂಗಳೂರು: ರಾಜ್ಯದಲ್ಲಿ ಮತ್ತೆ ವೈಫ್‌ ಸ್ವಾಪ್‌ ಮತ್ತೆ ಸದ್ದು ಮಾಡುತ್ತಿದೆ. ಬಸವನಗುಡಿ ಮಹಿಳಾ ಠಾಣೆಗೆ ಈ ಬಗ್ಗೆ ಒಬ್ಬರು ಮಹಿಳೆ ದೂರು ನೀಡಿದ್ದಾರೆ. ಈ ಹಿಂದೆಯೂ ಬೆಂಗಳೂರಿನಲ್ಲಿ ಇಂಥ ಕೆಲವು ಪ್ರಕರಣ ದಾಖಲಾಗಿದ್ದ ಬಗ್ಗೆ ವರದಿಯಾಗಿತ್ತು. ಹೆಚ್ಚಾಗಿ ಇವು ಶ್ರೀಮಂತರ ಹೈಫೈ ಸೊಸೈಟಿಗಳಲ್ಲಿ ನಡೆಯುತ್ತಿದ್ದು, ಬೆಳಕಿಗೆ ಬರದೇ ಮುಚ್ಚಿ ಹೋಗುತ್ತಿವೆ ಎನ್ನಲಾಗಿದೆ. ಹೆಚ್ಚಾಗಿ ಲೈಂಗಿಕ ಸುಖಕ್ಕಾಗಿ ಮಾತ್ರ ಇಂಥ ಕೃತ್ಯಗಳು ನಡೆಯುವುದು ದಾಖಲಾಗಿದೆ.

ಇದು ಹೆಂಡತಿಯರನ್ನು ಸುಖಕ್ಕಾಗಿ ಬದಲಾಯಿಸಿಕೊಳ್ಳುವ ರೂಢಿ. ತನ್ನ ಹೆಂಡತಿಯನ್ನು ಒಂದು ರಾತ್ರಿಯ ಮಟ್ಟಿಗೆ ಸ್ನೇಹಿತನ ಜೊತೆ ಇರುವಂತೆ ಮಾಡುವುದು, ಸ್ನೇಹಿತನ ಹೆಂಡತಿಯ ಜೊತೆಗೆ ತಾನು ಇರುವುದು ಹೀಗೆ ಇದು ನಡೆಯುತ್ತದೆ. ತಾತ್ಕಾಲಿಕ ಒಪ್ಪಂದಗಳಾದ ಇವು ಐಷಾರಾಮಿ ಬದುಕನ್ನು ಹೊಂದಿರುವ ಕುಬೇರರ ನಡುವೆ ನಡೆಯುತ್ತಿದೆ. ಅಮೆರಿಕದಲ್ಲಿ ಆರಂಭವಾದ ಈ ಹೇಯ ಪದ್ಧತಿ ಅಲ್ಲಿಂದ ಇಲ್ಲಿಗೂ ಪಸರಿಸಿದೆ.

ಕೆಲ ವರ್ಷಗಳ ಹಿಂದೆ ಕೇರಳದಲ್ಲಿ ಇದು ದೊಡ್ಡ ಸದ್ದು ಮಾಡಿದ್ದಲ್ಲದೆ, ಬೆಂಗಳೂರಿನಲ್ಲೂ ಕೆಲವು ಪ್ರಕರಣಗಳು ದಾಖಲಾಗಿದ್ದವು. ಈಗ ರಾಜಧಾನಿಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ. ಪೂರ್ಣಚಂದ್ರ ಎಂಬಾತ ವೈಪ್ ಸ್ವಾಪ್ ಮಾಡಲು ತನ್ನ ಪತ್ನಿಯನ್ನು ಬಲವಂತ ಮಾಡಿದ್ದಾನೆ. ಒಪ್ಪದಿದ್ದುದಕ್ಕೆ ಹೆಂಡತಿಗೆ ಕಿರುಕುಳ ನೀಡಿ, ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಸ್ವತಃ ಪತ್ನಿಯೇ ದೂರು ನೀಡಿದ್ದಾರೆ. ಸದ್ಯ ಗಂಡ ಪೂರ್ಣಚಂದ್ರ ಹಾಗೂ ಆತನ ಕುಟುಂಬದವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

Exit mobile version