Site icon newsroomkannada.com

ಕ್ಷುಲ್ಲಕ ಕಾರಣಕ್ಕೆ ಪತಿಯ ಪ್ರಾಣವನ್ನೇ ತೆಗೆದ ಕಿರಾತಕಿ

ಪುಣೆ: ಪುಣೆಯ ವನವಡಿ ಬಡಾವಣೆಯಲ್ಲಿ ಆಘಾತಕಾರಿ ಘಟನೆಯೊಂದು ಸಂಭವಿಸಿದೆ. ಕ್ಷುಲ್ಲಕ ಕಾರಣಕ್ಕಾಗಿ ಪತ್ನಿ ತನ್ನ ಪತಿಯನ್ನೇ ಕೊಂದಿದ್ದಾಳೆ.

ಏನಿದು ಘಟನೆ : ತನ್ನ ಹುಟ್ಟುಹಬ್ಬಕ್ಕೆ ಗಂಡ ದುಬಾರಿ ಉಡುಗೊರೆ ನೀಡಲಿಲ್ಲವೆಂದು, ಅವಳು ಬಯಸಿದಂತೆ ದುಬೈಗೆ ಪ್ರವಾಸ ಕರೆದುಕೊಂಡು ಹೋಗಲಿಲ್ಲ ಎಂಬ ಕಾರಣಕ್ಕಾಗಿ ದಂಪತಿ ಮಧ್ಯೆ ಜಗಳವಾಗಿದೆ. ತನ್ನ ಸಂಬಂಧಿಕರ ಹುಟ್ಟುಹಬ್ಬ ಆಚರಣೆಗಾಗಿಯೂ ಈ ಹಿಂದೆ ದೆಹಲಿಗೆ ಕರೆದುಕೊಂಡು ಹೋಗಲು ನಿಖಿಲ್ ಒಪ್ಪಲಿಲ್ಲ ಎಂದೂ ಪತ್ನಿ ರೇಣುಕಾ ಅಸಮಾಧಾನಗೊಂಡಿದ್ದರು.

ಈ ಹಿನ್ನೆಲೆಯಲ್ಲಿ ತೀವ್ರ ವಾಗ್ವಾದದ ವೇಳೆ ರೇಣುಕಾ ತನ್ನ ಪತಿ ನಿಖಿಲ್ ಮುಖಕ್ಕೆ ಹೊಡೆದಿದ್ದಾಳೆ. ಗುದ್ದಿದ ರಭಸಕ್ಕೆ ನಿಖಿಲ್ ಅವರ ಮೂಗು ಮತ್ತು ಕೆಲವು ಹಲ್ಲುಗಳು ಮುರಿದಿವೆ. ಭಾರೀ ರಕ್ತಸ್ರಾವದಿಂದ ನಿಖಿಲ್ ಪ್ರಜ್ಞೆ ಕಳೆದುಕೊಂಡರು. ನಂತರ ಸಾವನಪ್ಪಿದ್ದಾರೆ. ಈ ಮಾರಣಾಂತಿಕ ವಾಗ್ವಾದ ಪ್ರಕರಣದಿಂದಾಗಿ ಪೊಲೀಸರು ರೇಣುಕಾ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 302 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಹೆಚ್ಚಿನ ತನಿಖೆಗಾಗಿ ಅವರನ್ನು ಬಂಧಿಸಲಾಗಿದೆ.

ಆರು ವರ್ಷಗಳ ಹಿಂದೆ, ಸಾವಿಗೀಡಾದ ರಿಯಲ್​ ಎಸ್ಟೇಟ್​ ನಿರ್ಮಾಣ ಉದ್ಯಮದ ಉದ್ಯಮಿ ನಿಖಿಲ್ ಖನ್ನಾ ಅವರು 38 ವರ್ಷದ ರೇಣುಕಾ ಅವರನ್ನು ಪ್ರೀತಿಸಿ, ವಿವಾಹವಾಗಿದ್ದರು ಎಂದು Pune Times Mirror ವರದಿ ಮಾಡಿದೆ.

Exit mobile version