ವಾಷಿಂಗ್ಟನ್: ಶ್ವೇತಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಯೋಜಿಸಲಾಗಿದ್ದ ರಾಜ್ಯ ಭೋಜನ ಅತಿಥಿ ಪಟ್ಟಿಯಲ್ಲಿದ್ದ ಯುವತಿಯೊಬ್ಬಳ ಕುರಿತು ಗೂಗಲ್ ಹುಡುಕಾಟ ತೀವ್ರವಾಗಿದೆ.
ಸೀಮಾ ಸದಾನಂದನ್ ಅವರು ನರೇಂದ್ರ ಮೋದಿ ಅವರಿಗೆ ಆಯೋಜಿಸಲಾಗಿದ್ದ ರಾಜ್ಯ ಭೋಜನ ಅತಿಥಿ ಪಟ್ಟಿಯಲ್ಲಿದ್ದದ್ದರು. ಈಕೆ ಯುಎಸ್ ಅಧ್ಯಕ್ಷರ ಪುತ್ರಿ ಆಶ್ಲೇ ಬಿಡೆನ್ ಅವರೊಂದಿಗೆ ಡಿನ್ನರ್ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದು ನೆಟ್ಟಿಗರ ಕುತೂಹಲಕ್ಕೆ ಕಾರಣವಾಯಿತು.
ಸೀಮಾ ಸದಾನಂದನ್ ಅವರು ವಾಷಿಂಗ್ಟನ್ ಡಿಸಿಯಲ್ಲಿ ಭಾರತೀಯ ಅಮೆರಿಕನ್ ವಕೀಲರಾಗಿದ್ದಾರೆ. ಅವರು ತನ್ನ ಲಿಂಕ್ಡ್‌ಇನ್ ಪುಟದಲ್ಲಿ ವಕೀಲ ಮತ್ತು ಅನುಭವಿ ಪ್ರಚಾರ ತಂತ್ರಜ್ಞ ಎಂದು ತಿಳಿಸಿದ್ದಾರೆ. ಅವರು ತಾನು ಸಾರ್ವಜನಿಕ ನೀತಿ ರೂಪಣೆ, ಕ್ರಿಮಿನಲ್ ಜಸ್ಟೀಸ್ ರಿಫಾರ್ಮ್‌ನಲ್ಲಿ ನಿಪುಣೆ ಎಂದು ಬರೆದುಕೊಂಡಿದ್ದಾರೆ. ಸದಾನಂದನ್ ಅವರು ಹಿರಿಯ ನೀತಿ ಸಲಹೆಗಾರರಾಗಿ 2020 ರಲ್ಲಿ ಬಿಡೆನ್ ಅವರ ಚುನಾವಣಾ ಪ್ರಚಾರದಲ್ಲಿ ಕೆಲಸ ಮಾಡಿದ್ದರು.