ಎಲ್ ಸಾಲ್ವಡಾರ್‌ನಲ್ಲಿ 72ನೇ ಮಿಸ್ ಯೂನಿವರ್ಸ್ ಸ್ಪರ್ಧೆಯು ಇಂದು(ನವೆಂಬರ್ 18) ನಡೆಯಲಿದ್ದು, ಈ ಭಾರೀ ಸುಮಾರು 90 ಕ್ಕೂ ಹೆಚ್ಚು ದೇಶಗಳಿಂದ ಸ್ಪರ್ಧಿಗಳು ಸ್ಪರ್ಧಿಸಲಿದ್ದಾರೆ. ಭಾರತವನ್ನು 23 ವರ್ಷದ ಶ್ವೇತಾ ಶಾರ್ದಾ ಪ್ರತಿನಿಧಿಸಲಿದ್ದಾರೆ.
ಇತ್ತೀಚಿಗಷ್ಟೇ ಆಗಸ್ಟ್‌ನಲ್ಲಿ ನಡೆದ ಮಿಸ್ ದಿವಾ ಯೂನಿವರ್ಸ್ 2023 ಕಿರೀಟವನ್ನು ಮುಡಿಗೇರಿಸಿಕೊಂಡಿದ್ದ ಶ್ವೇತಾ ಈ ಮೂಲಕ 2023ರ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಅರ್ಹತೆಯನ್ನು ಪಡೆದುಕೊಂಡಿದ್ದಾರೆ.
ಭಾರತದ ಕಾಲಮಾನದ ಪ್ರಕಾರ ನವೆಂಬರ್ 19ರಂದು ಬೆಳಿಗ್ಗೆ 6:30 ಕ್ಕೆ ಮಿಸ್ ಯೂನಿವರ್ಸ್ ಎಕ್ಸ್ (ಹಿಂದೆ ಟ್ವಿಟರ್) ಖಾತೆ ಮತ್ತು ಯೂಟ್ಯೂಬ್ ಚಾನೆಲ್‌ನಲ್ಲಿ ವೀಕ್ಷಿಸಬಹುದಾಗಿದೆ.
ಶ್ವೇತಾ ಅವರು ಮೇ 24, 2000 ಇಸವಿಯಲ್ಲಿ ಚಂಡೀಗಢದಲ್ಲಿ ಜನಿಸಿದರು. ತಂದೆಯ ಆಸರೆಯಿಲ್ಲದೇ(Single parent) ತಾಯಿಯೊಂದಿಗೆ ಬೆಳೆದ ಶಾರ್ದಾ ತನ್ನ 16 ನೇ ವಯಸ್ಸಿನಲ್ಲಿ ತಾಯಿಯೊಂದಿಗೆ ಮುಂಬೈಗೆ ತೆರಳಿದರು. ಫೆಮಿನಾ ಬ್ಯೂಟಿ ಪೆಜೆಂಟ್ಸ್ ಪ್ರಕಾರ , ಶ್ವೇತಾ ದೆಹಲಿಯ ಇಂದಿರಾ ಗಾಂಧಿ ನ್ಯಾಷನಲ್ ಒಪನ್ ಯೂನಿವರ್ಸಿಟಿಯಲ್ಲಿ ಪದವಿಯನ್ನು ಪೂರ್ಣಗೊಳಿಸಿದ್ದಾರೆ.