main logo

ವೀಕೆಂಡ್ ಬಂತು ಅಂದ್ರೆ ಸಾಕು​ ಮನೆಗೆ ಹೋಗುತ್ತಿರಲಿಲ್ಲ “ನಾಟಿ” ಟೀಚರ್‌

ವೀಕೆಂಡ್ ಬಂತು ಅಂದ್ರೆ ಸಾಕು​ ಮನೆಗೆ ಹೋಗುತ್ತಿರಲಿಲ್ಲ “ನಾಟಿ” ಟೀಚರ್‌

ಬೆಂಗಳೂರು: ಬೆಂಗಳೂರಿನ ಮಾಲ್​ನಲ್ಲಿ ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದ ವಿಡಿಯೋ ವೈರಲ್​ ಆಗಿದ್ದು, ಇದೀಗ ಆ ವ್ಯಕ್ತಿ ಕೋರ್ಟ್​ಗೆ ಬಂದು ಶರಣಾಗಿದ್ದಾನೆ. ನಿವೃತ್ತ ಶಾಲಾ ಮುಖ್ಯೋಪಾಧ್ಯಾಯ ಆಗಿರುವ ಅಶ್ವಥ್ ನಾರಾಯಣ (60) ಎನ್ನುವಾತನ್ನು ಮಾಗಡಿ ರಸ್ತೆ ಠಾಣೆ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದು, ಈ ವೇಳೆ ಚಪಲ ಚನ್ನಿಗನ ಒಂದೊಂದೇ ಕೃತ್ಯಗಳು ಬಟಾಬಯಲಾಗಿವೆ.

ಪ್ರತೀ ವೀಕೆಂಡ್ ನಲ್ಲೂ ಆತನಿಗೆ ಇದೇ ದಂಧೆಯಾಗಿ ಮಾಡಿಕೊಂಡಿದ್ದ. ಅದರಂತೆ ಅಕ್ಟೋಬರ್ 29ರಂದು ಭಾನುವಾರ ಸಂಜೆ ಬೇಕಂತಲೇ ಉದ್ದೇಶ ಪೂರ್ವಕವಾಗಿಯೇ ಯುವತಿಯೋರ್ವಳ ಹಿಂಭಾಗಕ್ಕೆ ಡಿಕ್ಕಿ ಹೊಡೆದು ಅಸಹ್ಯವಾಗಿ ವರ್ತಿಸಿದ್ದ. ಕೇವಲ ಈ ಯುವತಿ ಮಾತ್ರವಲ್ಲದೇ ಅಂದು ಅದೇ ಮಾಲ್ ನಲ್ಲಿ ಐದಾರು ಯುವತಿಯರ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ. ಮಾಲ್​ನ ಸಿಸಿಟಿವಿ ಪರಿಶೀಲನೆ ಮಾಡಿದಾಗ ಅಶ್ವಥ್ ನಾರಾಯಣನ ಚಪಲದ ಚಟ ಬಯಲಿಗೆ ಬಂದಿದೆ.

ಬರೋಬ್ಬರಿ ಮೂರು ತಾಸು ಡ್ಯೂರೇಷನ್ ನ ಸಿಸಿಟಿವಿ ಫುಟೇಜ್ ಪರಿಶೀಲನೆ ನಡೆಸಿದ್ದು, ಮಾಲ್​ನ ಪರಿಶೀಲನೆ ವೇಳೆ ಘಟನೆಯ ದಿನ ಐದಾರು ಯುವತಿಯರ ಜೊತೆ ಅನುಚಿತ ವರ್ತನೆ ಮಾಡಿದ್ದಾನೆ. ಈ ಚಪಲ ಚೆನ್ನಿಗರಾಯನಿಗೆ ವೀಕೆಂಡ್ ಬಂತು ಅಂದ್ರೆ ಸಾಕು​ ಮನೆಗೆ ಹೋಗುತ್ತಿರಲಿಲ್ಲ. ಬರೀ ಮಾಲ್​ಗೆ ಹೋಗುವುದು ಮಹಿಳೆ ಹಾಗೂ ಯುವತಿರಿಗೆ ಡಿಕ್ಕಿ ಹೊಡೆಯುವುದು ಹಾಗೂ ಅವರ ದೇಹವನ್ನು ಮುಟ್ಟಿ ಆನಂದ ಪಡುವುದೇ ಈತನ ಕೆಲಸ. ಹೀಗಾಗಿ ಬೇರೆ ಬೇರೆ ಮಾಲ್ ಗಳಲ್ಲೂ ಈ ಹಿಂದೆ ಇದೇ ರೀತಿ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ನಗರದ ಹಲವು ಮಾಲ್ ಗಳ ಸಿಸಿಟಿವಿ ಪರಿಶೀಲನೆ ನಡೆಸಿದ್ದಾರೆ.

ಶಿಕ್ಷಕ,ಹೆಡ್ ಮಾಸ್ಟರ್ ಆಗಿದ್ದ ಅಶ್ವಥ ನಾರಾಯಣ ಒಳ್ಳೆಯ ಸಿಂಗರ್ ಆಗಿದ್ದ. ಆದ್ರೆ ಮಾಲ್ ನ ಸಿಸಿಟಿವಿ ಪರಿಶೀಲನೆ ವೇಳೆ ನಿವೃತ್ತ ಶಿಕ್ಷಕನ ಅಸಲಿ ಆಟ ಬಟಾಬಯಲಾಗಿದೆ. ಸದ್ಯ ಆರೋಪಿ ಕೋರ್ಟ್ ಗೆ ಬಂದು ಶರಣಾಗಿದ್ದು, ಪೊಲೀಸರು ಆರೋಪಿ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.

Related Articles

Leave a Reply

Your email address will not be published. Required fields are marked *

error: Content is protected !!