ಉಡುಪಿ: ನೇಜಾರಿನ ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ ಪ್ರಕರಣದ ನಾಲ್ವರನ್ನು ವ್ಯವಸ್ಥಿತವಾಗಿ ಕೊಲೆ ಮಾಡಿರುವುದನ್ನು ನೋಡಿದರೆ, ಕೊಲೆಗಾರ ಸುಪಾರಿ ಕಿಲ್ಲರ್ ಆಗಿರುವನೇ ಎಂಬ ಅನುಮಾನ ಕಾಡಿದ್ದು ನಾನಾ ದಿಕ್ಕುಗಳಲ್ಲಿ ಪೊಲೀಸರ ತನಿಖೆ ಆರಂಭವಾಗಿದೆ. ತನಿಖೆಗೆ ರಚಿಸಿರುವ 5 ಪೊಲೀಸ್ ತಂಡಗಳು ನಾನಾ ಆಯಾಮಗಳಲ್ಲಿ ಶೋಧನೆ ಆರಂಭಿಸಿವೆ. ಕೃತ್ಯ ಎಸಗಿ ಪರಾರಿಯಾಗುವುದಕ್ಕೆ ಬೈಕ್ನಲ್ಲಿ ಸಂತೆಕಟ್ಟೆಗೆ ಬಂದಿದ್ದ ಹಂತಕ ಆಟೋ ರಿಕ್ಷಾದಲ್ಲಿ ಹೋಗಿರುವ ಮಾರ್ಗ ಸೇರಿದಂತೆ ಎಲ್ಲ ಜಂಕ್ಷನ್ಗಳಲ್ಲಿನ ಸಿಸಿ ಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ.
ನಾಲ್ವರ ಕಗ್ಗೊಲೆ ಘಟನೆಯಲ್ಲಿ ಚಾಕು ಇರಿತಕ್ಕೊಳಗಾಗಿದ್ದ ಹಾಜಿರಾ ಎನ್ನುವ ಮಹಿಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ನವೆಂಬರ್ 12ರಂದು ಹಾಜಿರಾ ಸಹ ದುಷ್ಕರ್ಮಿ ಎರಡು ಕಡೆ ಚಾಕು ಇರಿದು ಪರಾರಿಯಾಗಿದ್ದ. ಇದೀಗ ಚಿಕತ್ಸೆ ಪಡೆದು ಮಣಿಪಾಲ ಕೆ.ಎಂಸಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಸಂಪೂರ್ಣ ವಿಶ್ರಾಂತಿ ಪಡೆಯಲು ವೈದ್ಯರ ಸೂಚನೆ ನೀಡಿದ್ದಾರೆ.