ರಾಜ್ಯದಲ್ಲಿ ಹುಲಿಯುಗುರು ಕಳೆದ ವಾರ ಭಾರಿ ಸದ್ದು ಮಾಡಿತ್ತು. ಹಲವರ ಬಂಧನವೂ ಆಗಿತ್ತು. ಇದೀಗ ಹುಲಿಯೊಂದಿಗೆ ಸರಸವಾಡುವ ಹುಡುಗಿಯೊಬ್ಬಳ ವಿಡಿಯೋ ವೈರಲ್ ಆಗಿದೆ. ಪ್ರಾಣಿಪ್ರಿಯೆಯೊಬ್ಬಳು ಬೆಕ್ಕಿನಂತೆ ಹುಲಿಯನ್ನು ಮುದ್ದಿಸಲು ಪ್ರಯತ್ನಿಸಿದ್ದಾಳೆ. ಅದರ ಬಾಯಿಗೆ ಕೈ ಕೊಡುತ್ತಾಳೆ. ಅದು ಇಡೀ ಕೈಯನ್ನು ತನ್ನ ಬಾಯಿಯಲ್ಲಿ ಕಚ್ಚಿ ಹಿಡಿಯಲು ನೋಡುತ್ತದೆ. ಹಾಗೇ ಅವಳ ತೊಡೆಯನ್ನು ಕಚ್ಚುತ್ತದೆ. ಅಕ್ಟೋಬರ್ 29 ರಂದು X ನಲ್ಲಿ ಈ ವಿಡಿಯೊ ಪೋಸ್ಟ್ ಮಾಡಲಾಗಿದೆ. ಸುಮಾರು 7 ಲಕ್ಷ ಜನರು ಈ ವಿಡಿಯೋ ನೋಡಿದ್ದಾರೆ. ಸುಮಾರು 130 ಜನರು ಇದನ್ನು ಹಂಚಿಕೊಂಡಿದ್ದಾರೆ. ಸುಮಾರು 160 ಜನರು ಪ್ರತಿಕ್ರಿಯಿಸಿದ್ದಾರೆ. ಈಕೆ ತನ್ನನ್ನು ತಾನು ಯಾಕೆ ಅಪಾಯಕ್ಕೆ ಒಡ್ಡಿಕೊಳ್ಳುತ್ತಿದ್ದಾಳೆ ಎಂದು ಅನೇಕರು ಪ್ರಶ್ನಿಸುತ್ತಿದ್ದಾರೆ.
Why put yourself in this situation? pic.twitter.com/SPBUx2RM6D
— OddIy Terrifying (@OTerrifying) October 29, 2023