Site icon newsroomkannada.com

video: ಚೀನಾದಲ್ಲಿ ಇಸ್ರೇಲಿ ರಾಜತಾಂತ್ರಿಕ ಅಧಿಕಾರಿಗೆ ಆಗಿದ್ದೇನು: ಸಂಘರ್ಷದ ನಡುವೆ ಬೆಚ್ಚಿಬೀಳಿಸುವ ಘಟನೆ

ಬೀಜಿಂಗ್: ಇಸ್ರೇಲ್‌ ಹಮಾಸ್‌ ಸಂಘರ್ಷದಲ್ಲಿ ಹಲವರು ಪ್ರಾಣಕಳೆದುಕೊಂಡಿದ್ದಾರೆ. ಈ ನಡುವೆ ಚೀನಾದ ರಾಜಧಾನಿ ಬೀಜಿಂಗ್‌ನಲ್ಲಿ ಶುಕ್ರವಾರ ಇಸ್ರೇಲಿ ರಾಜತಾಂತ್ರಿಕ ಅಧಿಕಾರಿಗೆ ಸಾರ್ವಜನಿಕರ ಮುಂದೆಯೇ ಹಲವು ಬಾರಿ ಇರಿದಿದ್ದು, ದಾಳಿಕೋರ ಮಧ್ಯಪ್ರಾಚ್ಯ ಮೂಲದವನೆಂದು ಕೆಲವು ವರದಿಗಳು ಹೇಳಿವೆ. ದಾಳಿಯ ಆಘಾತಕಾರಿ ದೃಶ್ಯಾವಳಿಗಳು ನೋಡಿದಾಗ, ಪಾದಚಾರಿ ಮಾರ್ಗದ ಮೇಲೆ ಮಲಗಿರುವ ಅಧಿಕಾರಿಯು ತನ್ನನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ತೋರಿಸುತ್ತದೆ. ಬಿಳಿ ಶರ್ಟ್ ಮತ್ತು ಸನ್‌ಗ್ಲಾಸ್‌ನ ವ್ಯಕ್ತಿಯೊಬ್ಬ ಜನರು ನಿಂತು ನೋಡುತ್ತಿರುವಾಗ ಚಾಕುವಿನಿಂದ ಪದೇ ಪದೇ ಇರಿದಿದ್ದಾನೆ.

ರಾಯಭಾರ ಕಚೇರಿಯ ಉದ್ಯೋಗಿಯ ಮೇಲೆ ದಾಳಿ ಮಾಡಲಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಯಭಾರ ಕಚೇರಿಯ ಆವರಣದಲ್ಲಿ ಈ ದಾಳಿ ನಡೆದಿಲ್ಲ ಎಂದು ಇಸ್ರೇಲ್‌ನ ವಿದೇಶಾಂಗ ಸಚಿವಾಲಯದ ಹೇಳಿಕೆ ನೀಡಿದೆ. ಅಧಿಕಾರಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ. ಆದಾಗ್ಯೂ ದಾಳಿಯ ಹಿಂದಿನ ಉದ್ದೇಶ ಇನ್ನೂ ಪತ್ತೆಯಾಗಿಲ್ಲ.

ಘಟನೆಯ ಬಗ್ಗೆ ಚೀನಾದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ದಾಳಿಯ ನಂತರ ಬೀಜಿಂಗ್‌ನಲ್ಲಿರುವ ರಾಯಭಾರ ಕಚೇರಿ ಶುಕ್ರವಾರ ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿದೆ. ಆದಾಗ್ಯೂ, ಎಎಫ್‌ಪಿ ಪತ್ರಕರ್ತರನ್ನು ಭದ್ರತಾ ಸಿಬ್ಬಂದಿ ಆವರಣದ ಸುತ್ತ ಚಿತ್ರೀಕರಣ ಮಾಡದಂತೆ ಕೇಳಿಕೊಂಡರು.

Exit mobile version