ಲೀಲಾವತಿ ಅವರ ಅಂತಿಮ ದರ್ಶನಕ್ಕೆ ವಿನೋದ್ ರಾಜ್ ಅವರ ಪತ್ನಿ ಅನು ಮತ್ತು ಮಗ ಯುವರಾಜ್ ಚೈನ್ನೈನಿಂದ ಬಂದಿದ್ದಾರೆ. ಈ ವೇಳೆ ಅಂತಿಮ ದರ್ಶನ ಪಡೆದು ಅಜ್ಜಿಯ ಬಗ್ಗೆ ಪ್ರೀತಿಯ ಮಾತನಾಡಿರುವ ಅವರು, ಅಜ್ಜಿಗಾಗಿ, ಅವರ ಕೆಲಸಗಳಿಗಾಗಿ ಕರ್ನಾಟಕದಲ್ಲೇ ಉಳಿಯುವ ಭರವಸೆ ನೀಡಿದ್ದಾರೆ.
ಮೊದಲಿನಿಂದಲೂ ಚೆನ್ನೈನಲ್ಲೇ ಇರುವ ಅವರು, ಅಜ್ಜಿಯ ನಿಧನದ ಬಳಿಕ ಕರ್ನಾಟಕದಲ್ಲಿ ಅವರಿಗೆ ಸಿಗುತ್ತಿರುವ ಗೌರವ ಕಂಡು ಆಶ್ಚರ್ಯ ಪಟ್ಟಿದ್ದಾರೆ. ಅಲ್ಲದೇ ತಮ್ಮ ಅಜ್ಜಿಯ ಆಸೆಗಳನ್ನು ಈಡೇರಿಸುವ ಸಲುವಾಗಿ ಮತ್ತು ಅವರು ಮಾಡುತ್ತಿದ್ದ ಸಾಮಾಜಿಕ ಕೆಲಸಗಳನ್ನು ಮುಂದುವರೆಸಲು ನಾನು ಇಲ್ಲಿಯೇ ಇರುವುದಾಗಿ ಹೇಳಿದ್ದಾರೆ.
ಚೆನ್ನೈನಲ್ಲಿ ವಿದ್ಯಾಭ್ಯಾಸ ನಡೆಸುತ್ತಿರುವ ಮೊಮ್ಮಗ ಯುವರಾಜ್‌ಗೆ ನಟಿ ಲೀಲಾವತಿ ಅವರ ಸಾಧನೆಗಳ ಬಗ್ಗೆ ಅಷ್ಟು ತಿಳಿದಿರಲಿಲ್ಲವಂತೆ. ಈಗ ಅವರ ಬಗ್ಗೆ, ಅವರ ಸಾಧನೆಗ ಅರಿವಾಗುತ್ತಿದ್ದು, ಜನರು ತೋರುತ್ತಿರುವ ಗೌರ, ಪ್ರೀತಿ ಕಂಡು ಮೂಕವಿಸ್ಮಿರಾಗಿದ್ದಾರೆ. ಹೀಗಾಗಿಯೇ ಇಲ್ಲಿಯೇ ಇರುವ ಸುಳಿವು ನೀಡಿದ್ದಾರೆ.
ತಾಯಿಯೇ ಸರ್ವಸ್ವ ಎಂದು ಬದುಕುತ್ತಿದ್ದ ನಟ ವಿನೋದ್ ರಾಜ್ ಈಗ ನಿಜಕ್ಕೂ ಒಂಟಿಯಾಗಿದ್ದಾರೆ. ಅವರಿಗೆ ಕುಟುಂಬದ ಆಸರೆ ನಿಜಕ್ಕೂ ಬೇಕಿದೆ. ತಂದೆಗೆ ಹೆಗಲಾಗಿ ನಿಲ್ಲುವ ಕೆಲಸ ಯುವರಾಜ್ ಮಾಡಬೇಕಿದೆ. ಇದೇ ಕಾರಣಕ್ಕೆ ನನ್ನ ತಂದೆ ಬೆಂಬಲವಾಗಿ ನಾನು ಇಲ್ಲಿಯೇ ಇರುತ್ತೇನೆ ಎಂದಿದ್ದಾರೆ. ಮದುವೆಯಾಗಿಲ್ಲ ಎಂದು ಕೊಂಡಿದ್ದ ವಿನೋದ್ ರಾಜ್ ಅವರ ಫ್ಯಾಮಿಲಿ ಫೋಟೋವನ್ನು ನಿರ್ದೇಶಕ ಪ್ರಕಾಶ್ ರಾಜ್ ಮೇಹು ಈ ಹಿಂದೆ ಫೇಸ್‌ಬುಕ್‌ನಲ್ಲಿ ಶೇರ್ ಮಾಡಿ ಎಲ್ಲರನ್ನು ದಂಗುಬಡಿಸಿದ್ದರು. ಲೀಲಾವತಿ ಅಂತ್ಯಕ್ರಿಯೆ ನಟಿ ಲೀಲಾವತಿ ಅವರ ಪಾರ್ಥಿವ ಶರೀರವನ್ನು ನೆಲಮಂಗಲದಿಂದ ತಂದು ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದೆ. ಮಧ್ಯಾಹ್ನ 3 ಗಂಟೆ ಸುಮಾರಿಗೆ ನೆಲಮಂಗಲದ ಸೋಲದೇವನಹಳ್ಳಿಗೆ ವಾಪಸ್ ತೆಗೆದುಕೊಂಡು ಹೋಗಿ ಅವರ ನೆಚ್ಚಿನ ತೋಟದ ಮನೆಯ ಬಳಿ ಅಂತ್ಯಕ್ರಿಯೆ ನಡೆಸಲಾಗುತ್ತದೆ.