ಬಹುಭಾಷಾ ನಟಿ ಸಾಯಿ ಪಲ್ಲವಿ ನಟಿಸಿರುವ ಸಿನಿಮಾದ ಸಂಖ್ಯೆ ಕಡಿಮೆ ಇದ್ದರು ತನ್ನ ವಿಭಿನ್ನ ಶೈಲಿಯ ನೃತ್ಯ ಹಾಗೂ ನಟನೆಯ ಮೂಲಕ ಸಿನಿ ರಸಿಕರ ಮನದಲ್ಲಿ ಅಚ್ಚಳಿಯದೆ ಉಳಿದು ಬಿಟ್ಟಿದ್ದಾರೆ. ಇದೀಗ ಅವರು, ಸಂದರ್ಶನವೊಂದರಲ್ಲಿ ತಮ್ಮ ಲವ್ ಲೈಫ್, ಮದುವೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಅದೇನೆಂದರೆ, ನಟಿ ಸಾಯಿಪಲ್ಲವಿ ಬಾಲ್ಯದಲ್ಲಿಯೇ ಪ್ರೇಮ ಪತ್ರ ಬರೆದಿದ್ದರಂತೆ. ಆದರೆ ಈ ಪ್ರೇಮ ಪತ್ರದ ವಿಷಯ ಮನೆಯವರಿಗೆ ತಿಳಿದು ಅವರನ್ನ ತೀವ್ರವಾಗಿ ಥಳಿಸಿದ್ದರಂತೆ. ಅಲ್ಲಿಂದ ಇಲ್ಲಿಯವರೆಗೂ ಪ್ರೇಮ, ಮದುವೆ ಎಂದರೆ ದೂರ ಸರಿಯುವ ಮಟ್ಟಿಗೆ ಹೋಗಿದ್ದಾರಂತೆ.
ವೃತ್ತಿಯಲ್ಲಿ ವೈದ್ಯೆಯಾ ದ ನಟಿ ಸಾಯಿ ಪಲ್ಲವಿ ಸಿನಿಮಾ ರಂಗಕ್ಕೆ ಕಾಲಿಟ್ಟು ಈಗ ತನ್ನದೇ ಆದ ಸಹಸ್ರಾರು ಫ್ಯಾನ್ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.