ಬೆಂಗಳೂರು: ಕಟ್ಟಡದ ಛಾವಣಿಯಲ್ಲಿದ್ದ ನೀರಿನ ಟ್ಯಾಂಕ್ ಎಗ್ರೈಸ್ ಮಳಿಗೆ ಮೇಲೆ ಬಿದ್ದು ಇಬ್ಬರು ಸಾವನಪ್ಪಿದ ಘಟನೆ ಶಿವಾಜಿನಗರದ ಬಸ್ ನಿಲ್ದಾಣ ಬಳಿ ನಡೆದಿದೆ. ಘಟನೆಯಲ್ಲಿ ಇಬ್ಬರು ತೀವ್ರ ಗಾಯಗೊಂಡಿದ್ದು, ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಲ್ಕು ಅಂತಸ್ತಿನ ಕಟ್ಟಡದ ಕೆಳಭಾಗದ ರಸ್ತೆಬದಿಯಲ್ಲಿ ತಳ್ಳುಗಾಡಿಯಲ್ಲಿ ಎಗ್ಲೈಸ್ ಮಳಿಗೆ ಇತ್ತು. ಇದೇ ಕಟ್ಟಡದ ಚಾವಣಿಯಲ್ಲಿ ಗೋಡೆಗಳನ್ನು ನಿರ್ಮಿಸಿ ನೀರಿನ ಟ್ಯಾಂಕ್ ಇರಿಸಲಾಗಿತ್ತು. ಈ ಟ್ಯಾಂಕ್ ಬುಧವಾರ ನೀರು ಭರ್ತಿ ಆಗಿತ್ತು’ ಎಂದು ಪ್ರತ್ಯಕ್ತದರ್ಶಿಯೊಬ್ಬರು ಹೇಳಿದರು. ‘ಬುಧವಾರ ರಾತ್ರಿ ಏಕಾಏಕಿ ಗೋಡೆ ಸಮೇತ ಟ್ಯಾಂಕ್ ಕುಸಿದು ರಸ್ತೆಯಲ್ಲಿದ್ದ ತಳ್ಳುಗಾಡಿ ಮೇಲೆ ಬಿದ್ದಿತು. ದೊಡ್ಡದಾದ ಶಬ್ದ ಬಂತು. ರಕ್ಷಣೆಗೆ ಹೋದಾಗ, ಎಲ್ಲೆಂದರಲ್ಲಿ ನೀರು ಇತ್ತು, ಆವಶೇಷಗಳಡಿ ಜನ ಸಿಲುಕಿದ್ದರು’ ಎಂದರು.
‘ಸ್ಥಳದಲ್ಲಿಯೇ ಇಬ್ಬರು ಮೃತಟ್ಟರು. ಉಳಿದವರನ್ನು ಆಟೊದಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು’ ಎಂದರು.