ಭಾರತದ ರೈತರೆಂದರೆ ಮಳೆ ಬೆಳೆಯಿಲ್ಲದೆ ಯಾವಾಗಲೂ ತಲೆ ಮೇಲೆ ಕೈ ಹೊತ್ತು ಕುಳಿತುಕೊಂಡು ಕೊರಗುತ್ತಿರುವ ವ್ಯಕ್ತಿಯೆಂದೆ ಜನಜನಿತ. ಈ ಬಗ್ಗೆ ಇಂಟರ್ ನೆಟ್ ನಲ್ಲಿ ರೈತ ಅಥವಾ ಫಾರ್ಮರ್ ಎಂದು ಹುಡುಕಾಡಿದರೆ ಅಂತಹ ಚಿತ್ರಗಳಿಗೇನು ಕೊರತೆಯಿಲ್ಲ. ಆದರೆ ಇಂತಹ ಚಿತ್ರಣಕ್ಕೆ ವಿರುದ್ಧವಾದ ಯುವ ರೈತನ ಕಮಾಲ್ ಕಹಾನಿಯನ್ನು ಇಂಟರ್ ನೆಟ್ನಲ್ಲಿ ವೆರೈಟಿ ಫಾರ್ಮರ್ ಇನ್ ಸ್ಟಾ
ಹೊಂದಿರುವ ಸುಜಿತ್ ಅವರ ಅಕೌಂಟ್ ನಲ್ಲಿ ಹಂಚಿಕೊಳ್ಳಲಾಗಿದೆ.
ರಿಕ್ಷಾದಲ್ಲಿ ತರಕಾರಿ ಆಡಿ ಕಾರಲ್ಲಿ ರೈತ: ವೆರೈಟಿ ಫಾರ್ಮರ್ ಜಾಲತಾಣದಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಕೇರಳದ ಸುಜಿತ್ ಎಂಬ ಯುವಕ ಹರಿವೆ ಕೃಷಿ ಮಾಡಿ ಅದನ್ನು ಪೇಟೆಗೆ ಸಾಗಿಸಿ ಮಾರಾಟ ಮಾಡುವ ದೃಶ್ಯವಿದೆ. ಸುಜಿತ್ ಹರಿವೆ ಕೊಯ್ಲು ಮಾಡಿ ಅದನ್ನು ಪೇಟೆಗೆ ರಿಕ್ಷಾದಲ್ಲಿ ಸಾಗಿಸುತ್ತಾರೆ. ರಿಕ್ಷಾದ ಹಿಂದೆಯೇ ಅವರು ಆಡಿ ಎ 4 ಕಾರಿನಲ್ಲಿ ಟಿಪ್ ಟಾಪ್ ಆಗಿ ಪಂಚೆಯುಟ್ಟು ಸಾಗುತ್ತಾರೆ.
ಬಳಿಕ ಹತ್ತಿರದ ರಸ್ತೆ ಕಾರು ನಿಲ್ಲಿಸಿ ರಿಕ್ಷಾದಿಂದ ತರಕಾರಿ ಇಳಿಸಿ ಅದನ್ನು ಮಾರಾಟ ಮಾಡುತ್ತಾರೆ. ಈ ವೇಳೆ ಅವರು ಪಂಚೆಯನ್ನು ತೆಗೆದು ಬರ್ಮುಡಾ ಧರಿಸಿ ವ್ಯಾಪಾರ ಮಾಡುತ್ತಾರೆ. ನಂತರ ಮನೆಗೆ ತೆರಳುವ ವೇಳೆ ಬರ್ಮುಡಾ ಮೇಲೆ ಪಂಚೆ ಧರಿಸಿ ಕಾರು ಚಲಾಯಿಸುವ ಚಿತ್ರವಿದೆ. ಸುಜಿತ್ ಅವರು ಕೆಲವು ದಿನಗಳ ಹಿಂದೆ ವೀಡಿಯೊವನ್ನು ಹಂಚಿಕೊಂಡಿದ್ದಾರೆ ಮತ್ತು ಅಂದಿನಿಂದ ಇದು 446,000 ಕ್ಕೂ ಹೆಚ್ಚು ಇಷ್ಟಗಳನ್ನು ಮತ್ತು 8 ಮಿಲಿಯನ್ ವೀಕ್ಷಣೆ ಕಂಡಿದೆ. ಸುಜಿತ್ ಅವರು Instagram ನಲ್ಲಿ 203,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ.