ಇತ್ತೀಚಿನ ದಿನಗಳಲ್ಲಿ ಯುವಜನರಿಗೆ ರೀಲ್ಸ್ ಹುಚ್ಚು ಹೆಚ್ಚಾಗುತ್ತಿದೆ. ಜಲಪಾತಗಳು, ತೊರೆ, ನದಿ, ಮೆಟ್ರೊ ರೈಲು, ಬಸ್ ಸೇರಿದಂತೆ ಎಲ್ಲ ಕಡೆಗಳಲ್ಲಿಯೂ ರೀಲ್ಸ್ ಮಾಡುವವರನ್ನು ಕಾಣುತ್ತೇವೆ. ಇಂತಹ ವರ್ತನೆ ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾದ ಹಲವು ಘಟನೆಗಳು ನಡೆದಿವೆ. ಇದೀಗ ರೈಲಿನಲ್ಲಿ ಯುವತಿಯರಿಬ್ಬರು ಮೈಚಳಿ ಬಿಟ್ಟು ನರ್ತಿರಿಸಿದ್ದು, ಸೊಂಟ ಕುಣಿಸಿದ ಪರಿ ಕಂಡು ಹಲವರು ಇವರಿಗೆ ಡ್ಯಾನ್ಸ್ ಮಾಡಲು ಬೇರೆ ಜಾಗ ಸಿಕ್ಕಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಯುವತಿಯರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದ್ದಾರೆ.
ವಿಡಿಯೋದಲ್ಲಿ ರೈಲಿನೊಳಗೆ ಇತರ ಪ್ರಯಾಣಿಕರೆಲ್ಲರೂ ತಮ್ಮ ತಮ್ಮ ಸೀಟಿನಲ್ಲಿ ನೆಮ್ಮದಿಯಿಂದ ಮಲಗಿ ನಿದ್ದೆ ಮಾಡುತ್ತಿರುತ್ತಾರೆ. ಆ ಸಂದರ್ಭದಲ್ಲಿ ಯುವತಿಯೊಬ್ಬಳು ರೀಲ್ಸ್ ಮಾಡುವ ಸಲುವಾಗಿ ಸೊಂಟ ಬಳುಕಿಸುತ್ತಾ, ಭೋಜ್ ಪುರಿ ಹಾಡಿಗೆ ಬೋಲ್ಡ್ ಆಗಿ ಡಾನ್ಸ್ ಮಾಡುತ್ತಾಳೆ, ಕೊನೆಯಲ್ಲಿ ಆಕೆಯ ಗೆಳತಿಯೂ ಆಕೆಯೊಂದಿಗೆ ಸೇರಿ ನೃತ್ಯ ಮಾಡುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಅನೇಕರು ಈ ವಿಡಿಯೋವನ್ನು ಕಂಡು ಸಾರ್ವಜನಿಕ ಸ್ಥಳಗಳಲ್ಲಿ ಇದೆಂತಹ ಹುಚ್ಚಾಟ ಎಂದು ಕಿಡಿ ಕಾರಿದ್ದಾರೆ.