Site icon newsroomkannada.com

ವಿಡಿಯೋ ನೋಡಿ: ಮಂಗಳೂರು ನಗರದಲ್ಲಿ ಕಾಡುಕೋಣ ಬಿಂದಾಸ್‌ ಓಡಾಟ

ಮಂಗಳೂರು: ನಗರದ ಕದ್ರಿ, ಶಿವಭಾಗ್, ಕೈಬಟ್ಟಲ್ ಪರಿಸರದಲ್ಲಿ ಕಾಡುಕೋಣವೊಂದು ರಾತ್ರಿ ವೇಳೆ ಓಡಾಟ ನಡೆಸಿದ್ದು ವಿಷಯ ತಿಳಿದ ಅರಣ್ಯ ಇಲಾಖೆಯ ಸಿಬಂದಿ ಸ್ಥಳದಲ್ಲಿ ಹುಡುಕಾಟ ನಡೆಸಿದ್ದಾರೆ.

ಭಾನುವಾರ ರಾತ್ರಿ ವೇಳೆ ಕದ್ರಿ ಮತ್ತು ಕೈಬಟ್ಟಲ್ ಪರಿಸರದಲ್ಲಿ ಕಾಡುಕೋಣ ಸಂಚಾರ ನಡೆಸಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ಮನೆಯ ಕಾಂಪೌಂಡ್ ಒಳಗಡೆ ಕೋಣ ಬಂದಿದ್ದು ಜನರು ಆತಂಕಗೊಂಡಿದ್ದಾರೆ. ಶಿವಭಾಗ್ ಕಡೆಯಿಂದ ಬಂದಿದ್ದ ಕಾಡು ಕೋಣ ಬಳಿಕ ರಸ್ತೆಯಲ್ಲೇ ಸಾಗಿ ಕೈಬಟ್ಟಲ್ ಮೂಲಕ ತೆರಳಿ ಕಣ್ಮರೆಯಾಗಿದೆ. ಈ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಇದರಂತೆ, ಇಂದು ಬೆಳಗ್ಗೆ ಕದ್ರಿ ಪರಿಸರದಲ್ಲಿ ಅರಣ್ಯ ಸಿಬಂದಿ ಹುಡುಕಾಟ ನಡೆಸಿದ್ದಾರೆ.

Exit mobile version