ಪುತ್ತೂರು: ಆರ್ಯಾಪು ಮತ್ತು ನಿಡ್ಪಳ್ಳಿ ಗ್ರಾ.ಪಂ ಉಪ ಚುನಾವಣೆಯಲ್ಲಿ ಆರ್ಯಾಪು ಪಂಚಾಯಿತಿಯಲ್ಲಿ ಸುಬ್ರಾಯ ಬಲ್ಯಾಯರು ಭಾರಿ ಅಂತರದಿಂದ ಜಯಗಳಿಸಿದ್ದಾರೆ. ಹಿಂದುತ್ವ ಮತ್ತು ಅಭಿವೃದ್ಧಿ ವಿಚಾರದಲ್ಲಿ ಕ್ಷೇತ್ರದ ಮತದಾರ ಒಂದು ಒಳ್ಳೆಯ ಸಂದೇಶ ನೀಡಿದ್ದಾರೆ.
ನಿಡ್ಪಳ್ಳಿ ಉಪಚುನಾವಣೆಯಲ್ಲಿ ಪ್ರಬಲ ಸ್ಪರ್ಧೆ ಕೊಟ್ಟು ಪ್ರಬಲ ಸ್ಪರ್ಧೆ ನೀಡಿದ್ದಾರೆ. ಒಟ್ಟಾರೆಯಾಗಿ ಕ್ಷೇತ್ರದಲ್ಲಿ ಕಳೆದ ವಿಧಾನಸಭಾ ಚುನಾವಣೆ ಬಳಿಕ ನಡೆದ ಬೆಳವಣಿಗೆಗಳು, ಹಣಬಲ, ತೋಳ್ಬಲ, ಹೆಂಡ ಹಂಚಿದ ವಿಚಾರ, ಸೀರೆ ಹಂಚಿದ ಷಡ್ಯಂತ್ರವನ್ನು ಧಿಕ್ಕರಿಸಿ ಮತದಾರ ಪ್ರಬುದ್ಧ ಎಂಬುದನ್ನು ಸಾಬೀತು ಮಾಡಿದ್ದಾರೆ. ಈ ಕ್ಷೇತ್ರ ತತ್ವ, ಸಿದ್ಧಾಂತ, ಸ್ವಾರ್ಥ ರಾಜಕಾರಣವನ್ನು ಮೆಟ್ಟಿ ನಿಲ್ಲುವ ಕ್ಷೇತ್ರವಾಗಿ ಮತ್ತೊಮ್ಮೆ ಗುರುತಿಸಿಕೊಂಡಿದೆ. ಚುನಾವಣೆ ಮೂಲಕ ಮತದಾರರ ಭಾವನೆಗಳೇನು ಎಂಬುದು ದೃಢಪಟ್ಟಿದೆ. ಅದೇರೀತಿ ಸಾಮಾನ್ಯ ಕಾರ್ಯಕರ್ತನ ಪರವಾಗಿ ಈ ಕ್ಷೇತ್ರದ ಜನತೆ ಇದ್ದಾರೆ ಎಂಬುದನ್ನು ಈ ಬಾರಿ ನಿರೂಪಿತವಾಗಿದೆ.
ಎರಡೂ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ನಡುವೆ ಪರಿವಾರ ಸದಸ್ಯರು ಪ್ರಬಲ ಸ್ಪರ್ಧೆ ನೀಡಿದ್ದಾರೆ. ಕ್ಷೇತ್ರದ ಮತದಾರ ತೀರ್ಪನ್ನು ನಾವು ಗೌರವಿಸುತ್ತೇವೆ. ಮತ್ತು ಮುಂದಿನ ದಿನಗಳಲ್ಲಿಯೂ ಕೂಡ ಹಿಂದುತ್ವ ಪ್ರತಿಪಾದನೆ ಮಾಡುತ್ತಾ, ಹಿಂದೂ ಸಮಾಜದ ಪರವಾಗಿ ಅಶಕ್ತರ ಶೋಷಿತರ ಪರವಾಗಿ ಹೋರಾಡುತ್ತೇವೆ. ಬಿಜೆಪಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ ಎಂಬ ಪ್ರಶ್ನೆಗೆ ಉತ್ತರಿಸಿ ನಮ್ಮ ಸ್ಪರ್ಧೆ ಧರ್ಮದ ಅಡಿಯಲ್ಲಿ ನಮ್ಮ ಸ್ಪರ್ಧೆ ನಡೆದಿತ್ತು. ಕಾರ್ಯಕರ್ತರ ಭಾವನೆಗಳಿಗೆ ಬೆಲೆ ಕೊಡುವ ಜನಪ್ರತಿನಿಧಿ ಇರಬೇಕು ಎಂಬ ವಿಚಾರದಲ್ಲಿ ನಮ್ಮ ಸ್ಪರ್ಧೆ ನಡೆದಿತ್ತು. ಮೋದಿ ಮತ್ತು ಯೋಗಿ ಮಾದರಿಯ ಆಡಳಿತ ಕರ್ನಾಟಕದಲ್ಲಿ ಇರಬೇಕು ಎಂಬ ಆಲೋಚನೆ ಇತ್ತು. ನಾನು ಯಾವುದೇ ಪಕ್ಷದ ವಿರುದ್ಧ ಹೇಳಿಕೆ ನೀಡುವುದಿಲ್ಲ. ಯಾರ ಪರವಾಗಿ ಮತದಾರ ಇದ್ದಾರೆ ಎಂಬುದು ಇಂದಿನ ಚುನಾವಣಾ ಫಲಿತಾಂಶದಲ್ಲಿ ಸಾಬೀತಾಗಿದೆ.
ರಾಜ್ಯ ಮಟ್ಟದಲ್ಲಿ ಪರ್ಯಾಯ ರಾಜಕಾರಣ ಮಾಡುತ್ತೀರಾ ಎಂಬ ಪ್ರಶ್ನೆಗೆ ಮುಂದಿನ ದಿನಗಳಲ್ಲಿ ಕಾರ್ಯಕರ್ತರ ಅಪೇಕ್ಷೆ ಮೇರೆಗೆ, ಆರ್‌ಎಸ್‌ಎಸ್ ಹಿರಿಯರ ಆಲೋಚನೆಗೆ ತಕ್ಕಂತೆ ಕಾರ್ಯನಿರ್ವಹಿಸಲಾಗುವುದು. ಅದೇ ರೀತಿ ನಮಗೆ ಸಹಕಾರ ಒದಗಿಸಿದ ಬಿಜೆಪಿ ಹಿರಿಯರ, ದಕ್ಷಿಣ ಕನ್ನಡ ಜಿಲ್ಲೆಯ ಸ್ವಾಮೀಜಿಗಳ ಆಶಯದಂತೆ ಮುಂದಿನ ದಿನಗಳಲ್ಲಿ ಸಂಘಟನೆ ಬಲಪಡಿಸುತ್ತೇವೆ. ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಸ್ಪರ್ಧೆ ಕುರಿತ ಪ್ರಶ್ನೆಗೆ ಉತ್ತರಿಸಿ, ಸಮಯ ಮತ್ತು ಸಂದರ್ಭಕ್ಕೆ ಅನುಗುಣವಾಗಿ ನಮ್ಮ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.