newsroomkannada.com

ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ಹೊಸ ಮಲ್ಟಿ ಅಕ್ಸೆಲ್ ಸ್ಲೀಪರ್ ಬಸ್‌ ಹೇಗಿವೆ ನೋಡಿ, ಈ ಬಸ್‌ ಗಳಲ್ಲಿದೆ ಮೊಬೈಲ್ ಚಾರ್ಜಿಂಗ್, ಲ್ಯಾಪ್ಟಾಪ್ ಚಾರ್ಜಿಂಗ್ , ಲೊಕೇಶನ್‌ ಟ್ರಾಕಿಂಗ್‌ ಸಿಸ್ಟಮ್‌

ಕಲ್ಯಾಣ ಕರ್ನಾಟಕ ಸಾರಿಗೆ ನಿಗಮವು ಈ ಭಾಗದ ಪ್ರಯಾಣಿಕರಿಗೆ ಹವಾನಿಯಂತ್ರಿತ ಸ್ಲೀಪರ್ ಮಾದರಿಯಲ್ಲಿ ಅತ್ತುತ್ತಮ ಸಾರಿಗೆ ಸೇವೆ ಒದಗಿಸಲು 60 ಮಲ್ಟಿ ಆಕ್ಸೆಲ್ ಸ್ಲೀಪರ್ ಬಸ್‌ ಗಳ ಕಾರ್ಯಾಚರಣೆ ಆರಂಭಿಸಿದೆ. ಈ ಬಸ್‌ ಗಳು 15 ಮೀಟರ್ ಉದ್ದ ಇದ್ದು ಪ್ರತಿಷ್ಠಿತ ವೋಲ್ವೋ ಕಂಪನಿಯಿಂದ ತಯಾರಿಸಲಗಿದೆ. ಈ ಬಸ್‌ ಗಳನ್ನು ಕಲ್ಯಾಣ ಕರ್ನಾಟಕ ಭಾಗದಿಂದ ದೂರದ ಮಾರ್ಗಗಳಿಗೆ ಕಾರ್ಯಚರಣೆ ಮಾಡಲಾಗುತ್ತದೆ. ಇ ವೋಲ್ವೋ 9600 ಮಾದರಿಯ ಹವಾ ನಿಯಂತ್ರಿತ ಮಲ್ಟಿ ಆಕ್ಸೆಲ್ ಸ್ಲೀಪರ್ ಬಸ್‌ಗಳಿಗೆ 350 ಎಚ್‌ಪಿ ಸಾಮರ್ಥ್ಯದ ಬಿಎಸ್ 6 ಇಂಜಿನ್‌ ಹೊಂದಿದೆ.


ಹಾಗೂ ಹೈ ಶಿಫ್ಟ್ ಅಟೊಮೆಟೆಡ್‌ ಗೇರ್‌ ಬಾಕ್ಸ್ ಅಳವಡಿಸಲಾಗಿದೆ. ಈ ಬಸ್‌ಗಳು ಸಂಪೂರ್ಣವಾಗಿ ಏರ್‌ ಸಸ್ಪೆಶನ್‌ ಹೊಂದಿದ್ದು, ಹೈ ಎಂಡ್‌ ಸಸ್ಪೆಶನ್‌ ಹೊಂದಿರುವ ಚಾಲಕರ ಆಸನ ಅಳವಡಿಸಲಾಗಿದೆ. ಈ ಬಸ್‌ ಗಳು 40 ಪ್ರಯಾಣಿಕ ಸೀಟ್‌ಗಳನ್ನು ಹೊಂದಿದೆ. ಹಾಗೂ ಪ್ರಯಾಣಿಕರು ಕುಳಿತುಕೊಂಡಾಗ ಬೆನ್ನು ಭಾಗಕ್ಕೆ ನೋವಾಗದಂತೆ ಮೃದುವಾದ ಮೆತ್ತನೆಯ ಫೋಮ್‌ ಅಳವಡಿಸಲಾಗಿದೆ. ಅಲ್ಲದೆ ಕಿರು ಲಗೇಜ್‌ ಇಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಹಾಗೂ ದೊಡ್ಡ ಪ್ರಮಾಣ ಲಗೇಜ್‌ ಕೊಂಡೊಯ್ಯಲು ದೊಡ್ಡದಾದ ಡಿಕ್ಕಿ ವ್ಯವಸ್ಥೆಯಿದೆ. ಪ್ರಯಾಣಿಕರಿಗೆ ಓದುವ ಲ್ಯಾಂಪ್ ಮೊಬೈಲ್ ಚಾರ್ಜಿಂಗ್, ಲ್ಯಾಪ್ಟಾಪ್ ಟಾಪ್ ಚಾರ್ಜಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಯಾಣಿಕರ ಸುರಕ್ಷಿತೆಗಾಗಿ ಅಗ್ನಿಶಮನ ವ್ಯವಸ್ಥೆ, ರಿವರ್ಸ್‌ ಪಾರ್ಕಿಂಗ್‌, ಲೊಕೇಶನ್‌ ಟ್ರಾಕಿಂಗ್‌, ವ್ಯವಸ್ಥೆ ಅಳವಡಿಸಲಾಗಿದೆ

Exit mobile version