ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಚುರುಕಾಗಿದ್ದು, ಜಿಲ್ಲೆಯ ಜೀವನದಿಗಳು ಜೀವಕಳೆ ಪಡೆದಿವೆ. ಪುರಾಣ ಪ್ರಸಿದ್ಧ ಕಟೀಲು ಕ್ಷೇತ್ರದ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದ್ದು, ದೇವಳ ಸುತ್ತಲೂ ನಂದಿನಿ ನದಿ ಆವರಿಸಿದೆ. ನಂದಿನಿ ನದಿಯ ಅಬ್ಬರದ ಹರಿವಿನ ದೃಶ್ಯವನ್ನು ಛಾಯಾಗ್ರಾಹಕ ನವೀನ್ ಕಟೀಲ್ ಡ್ರೋನ್ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ.
ಕಳೆದ ಜೂನ್ ತಿಂಗಳಿನಲ್ಲಿ ಸಂಪೂರ್ಣ ಬರಿದಾಗಿದ್ದ ನಂದಿನಿ ನದಿ ಇದೀಗ ಜೀವಕಳೆ ಪಡೆದಿದೆ. ಪುರಾಣ ಪ್ರಸಿದ್ಧ ಕಟೀಲು ಕ್ಷೇತ್ರಕ್ಕೂ ನಂದಿಗೂ ನದಿಗೂ ಪೌರಾಣಿಕ ಹಿನ್ನಲೆಯಿದೆ. ನಂದಿನಿ ನದಿ ಮಧ್ಯೆ ದೇವಳವಿದ್ದು, ಭಕ್ತರ ಕಣ್ಮನ ಸೆಳೆಯುತ್ತಿದೆ.