main logo

ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ, ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿನಿಯರ ಕನ್ಯತ್ವ ಪರೀಕ್ಷೆ

ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ, ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿನಿಯರ ಕನ್ಯತ್ವ ಪರೀಕ್ಷೆ

ಕಜಕಿಸ್ತಾನದ ಅಲ್ ಫರಾಬಿ ನ್ಯಾಷನಲ್ ಯೂನಿವರ್ಸಿಟಿಯ ಶಾಕಿಂಗ್​​​ ಪ್ರಕರಣವೊಂದು ಬೆಳಕಿಗೆ ಬಂದಿದೆ. ‘ಡೈಲಿ ಸ್ಟಾರ್’ ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಪ್ರತಿಷ್ಠಿತ ಅಲ್ ಫರಾಬಿ ರಾಷ್ಟ್ರೀಯ ವಿಶ್ವವಿದ್ಯಾಲಯದ ಕೆಲವು ವೈದ್ಯಕೀಯ ಅಧಿಕಾರಿಗಳು ತಮ್ಮದೇ ವಿಶ್ವವಿದ್ಯಾಲಯದ 190 ವಿದ್ಯಾರ್ಥಿನಿಯರ ಕನ್ಯತ್ವದ ಸ್ಥಿತಿಯನ್ನು ಅವರ ಹೆಸರು ಹಾಗೂ ಸಂಪೂರ್ಣ ವಿಳಾಸದೊಂದಿಗೆ ಲೀಕ್​​​​ ಮಾಡಿದೆ. ಆದರೆ ವಿಶ್ವವಿದ್ಯಾನಿಲಯದಲ್ಲಿ ಕನ್ಯತ್ವ ಪರೀಕ್ಷೆ ವರದಿ(Virginity Status) ಏಕೆ ಮಾಡಲಾಯಿತು? ಎಂಬುದರ ಬಗ್ಗೆ ಯಾವುದೇ ಮಾಹಿತಿ ಹೊರಬಂದಿಲ್ಲ. ವಿಶ್ವವಿದ್ಯಾಲಯದ ಈ ಕ್ರಮದಿಂದ ಎಲ್ಲರೂ ಬೆಚ್ಚಿಬಿದ್ದಿದ್ದಾರೆ.\

ವಿದ್ಯಾರ್ಥಿನಿಯರ ಈ ವಿವರಗಳು ಸೋರಿಕೆಯಾದ ತಕ್ಷಣ, ಇದು ವಿಶ್ವವಿದ್ಯಾಲಯದ ಸಾಮಾಜಿಕ ಮಾಧ್ಯಮ ಗುಂಪಿನಲ್ಲಿ ಬಹಳ ವೇಗವಾಗಿ ವೈರಲ್ ಆಗಿದೆ. ಆದರೆ ಕನ್ಯತ್ವ ಪರೀಕ್ಷೆ ಏಕೆ ಮಾಡಲಾಯಿತು? ಎಂಬುದರ ಬಗ್ಗೆ ಯಾವುದೇ ಮಾಹಿತಿ ಹೊರಬಂದಿಲ್ಲ. ವಿಶ್ವವಿದ್ಯಾನಿಲಯದ ವೈದ್ಯಕೀಯ ಕೇಂದ್ರದಲ್ಲಿ ವಿದ್ಯಾರ್ಥಿನಿಯರನ್ನು ಕೆಲವು ಸ್ತ್ರೀರೋಗ ಪರೀಕ್ಷೆಗಳಿಗೆ ಒಳಪಡಿಸಲಾಗಿತ್ತು. ವಿಶ್ವವಿದ್ಯಾನಿಲಯದಲ್ಲಿ ಇಂತಹ ಪರೀಕ್ಷೆಗಳು ಅಗತ್ಯವಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಯಾವುದೇ ದೃಢೀಕರಣವಿಲ್ಲ.

ಈ ಸುದ್ದಿ ಎಲ್ಲೆಡೆ ವೈರಲ್​​ ಆಗುತ್ತಿದ್ದಂತೆ ಕಜಕಿಸ್ತಾನದ ವಿಜ್ಞಾನ ಮತ್ತು ಉನ್ನತ ಶಿಕ್ಷಣ ಸಚಿವ ಸಯಾಸತ್ ನುರ್ಬೆಕ್ ಮಾತಾಡಿ ‘ಇದು ವಿದ್ಯಾರ್ಥಿನಿಯರ ಖಾಸಗಿತನದ ಉಲ್ಲಂಘನೆಯಾಗಿದೆ. ಇದಕ್ಕೆ ಕಾರಣರಾದವರೆಲ್ಲರೂ ಕಾನೂನಿನ ಅಡಿಯಲ್ಲಿ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. ತನಿಖೆ ಈಗಾಗಲೇ ಪ್ರಾರಂಭವಾಗಿದೆ’ ಎಂದು ಹೇಳಿದ್ದಾರೆ.

‘ಡೈಲಿ ಮೇಲ್’ನಲ್ಲಿ ಪ್ರಕಟವಾದ ಸುದ್ದಿ ಪ್ರಕಾರ, ವಿಶ್ವವಿದ್ಯಾಲಯದ ಸಾಮಾಜಿಕ ಮಾಧ್ಯಮ ಗುಂಪಿನಲ್ಲಿ ಫ್ಲೋರೋಗ್ರಫಿ ಪರೀಕ್ಷೆಗೆ ಹಾಜರಾಗದ ವಿದ್ಯಾರ್ಥಿಗಳ ಮಾಹಿತಿಯನ್ನು ಹಂಚಿಕೊಳ್ಳಲು ಸೂಚನೆ ನೀಡಲಾಗಿತ್ತು. ಆದರೆ ತಪ್ಪಾಗಿ ಅವರು ಕನ್ಯತ್ವದ ವಿವರವನ್ನು ಪೋಸ್ಟ್ ಮಾಡಿದ್ದಾರೆ ಎಂದು ವರದಿಯಾಗಿದೆ.

Related Articles

Leave a Reply

Your email address will not be published. Required fields are marked *

error: Content is protected !!