ಮಂಗಳೂರು: ನಗರದಲ್ಲಿ ಮಂಗಳೂರು ಮೋಟಾರ್ಸ್ ಅಸೋಸಿಯೇಶನ್ ವತಿಯಿಂದ ನೆಹರು ಮೈದಾನದಲ್ಲಿ ವಿಂಟೇಜ್ ಕಾರುಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಕಾರುಗಳ ಪ್ರದರ್ಶನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಿದರು.
1925ರ ಅವಧಿಯ ರೋಲ್ಸ್ ರಾಯ್, ಅಂಬಾಸಿಡರ್, ಫಿಯಟ್ ಕಾರುಗಳಿದ್ದವು. ಸ್ವಾತಂತ್ರ್ಯಕ್ಕೂ ಹಿಂದೆ ತಯಾರಾದ ಕಾರುಗಳನ್ನು ಅವುಗಳ ಮಾಲೀಕರು ಜತನದಿಂದ ಕಾಯ್ದುಕೊಂಡಿದ್ದರು. ಅದೇ ರೀತಿ ಇಟಲಿ ನಿರ್ಮಿತ ಲ್ಯಾಂಬಿ ಸ್ಕೂಟರ್ ಗಳು, ಬುಲೆಟ್ ಬೈಕ್, ಪ್ರದರ್ಶನದಲ್ಲಿದ್ದವು.