Site icon newsroomkannada.com

ಮಂದಾರದ ಜನತೆಯ ಮಹಾನ್‌ ಕಾರ್ಯ: ರೈಲು ಹಳಿ ಮೇಲೆ ಬಿದ್ದ ಮರ ತೆರವುಗೊಳಿಸಿದ ಜನತೆ

ಮಂಗಳೂರು: ಈ ಹಿಂದೆ ಮಂಗಳೂರಿನಲ್ಲಿ ವೃದ್ಧೆಯೊಬ್ಬರು ರೈಲು ಹಳಿಗೆ ಮರ ಬಿದ್ದಿರುವುದನ್ನು ಕಂಡು ಕೆಂಪು ಬಟ್ಟೆ ಪ್ರದರ್ಶಿಸಿ ಸಂಭಾವ್ಯ ಅವಘಡ ತಪ್ಪಿಸಿದ ಘಟನೆ ವರದಿಯಾಗಿತ್ತು. ಅಂತಹುದೇ ಘಟನೆ ಮತ್ತೊಮ್ಮೆ ನಡೆದಿದೆ. ಗಾಳಿ ಮಳೆಗೆ ರೈಲ್ವೆ ಹಳಿಗೆ ಸಣ್ಣ ಗಾತ್ರದ ಮರವೊಂದು ಬಿದ್ದ ಹಿನ್ನಲೆಯಲ್ಲಿ ಸ್ಥಳೀಯರು ಮರ ತೆರವು ಮಾಡಿದ ಘಟನೆ ನಗರ ಕುಡುಪುವಿನಲ್ಲಿ ನಡೆದಿದೆ. ಪಡೀಲ್‌ ಜೋಕಟ್ಟೆ ನಡುವೆ ಪಚ್ಚನಾಡಿ ಸಮೀಪ ಮಂದಾರದಲ್ಲಿ ಈ ಘಟನೆ ಸಂಭವಿಸಿದೆ. ಭಾನುವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ರೈಲು ಹಳಿ ಪಕ್ಕದ ಗುಡ್ಡದಿಂದ ಸಣ್ಣ ಗಾತ್ರದ ಮರ ರೈಲು ಹಳಿಗೆ ಬಿದ್ದಿತ್ತು. ತಕ್ಷಣ ಗಮನಿಸಿದ ಸ್ಥಳೀಯರಾದ ಮನೋಜ್‌, ನವೀನ್‌, ಸತೀಶ್‌ ಅವರು ಮರ ತೆರವು ಮಾಡಿ ರೈಲು ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.

Exit mobile version