ಬೆಂಗಳೂರು: ವಿಧಾನಸೌಧದಲ್ಲಿ ಇತ್ತೀಚೆಗೆ ಅನಾಮಿಕ ವ್ಯಕ್ತಿಯೊಬ್ಬ ಶಾಸಕರು ಕುಳಿತುಕೊಳ್ಳುವ ಸ್ಥಳದಲ್ಲಿ ಕುಳಿತು ಗೊಂದಲವೆಬ್ಬಿಸಿದ್ದ ಘಟನೆ ಮರೆಯಾಗುವ ಮುನ್ನವೇ ಅಂತಹುದೇ ಆತಂಕಕಾರಿ ಪ್ರಕರಣವೊಂದು ನಡೆದಿದೆ.
ಈ ಹಿಂದೆ ಭದ್ರತಾ ಲೋಪ ಹಿನ್ನೆಲೆಯಲ್ಲಿ ವಿಧಾನಸೌಧಕ್ಕೆ ಒದಗಿಸಲಾಗಿದ್ದ ಬಿಗಿಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ವಿಧಾನಸೌಧಕ್ಕೆ ಬರುವ ಪ್ರತಿಯೊಬ್ಬರನ್ನು ತೀವ್ರ ತಪಾಸಣೆಗೊಳಪಡಿಸಿ ಅವರನ್ನು ಒಳಗೆ ಕಳುಹಿಸಲಾಗುತ್ತಿದೆ. ಇಂದು ಇಂದು ವಿಧಾನಸೌಧದ ಪೂರ್ವ ಬಾಗಿಲಿನ ಮೂಲಕ ಒಳಪ್ರವೇಶಿಸಲು ಮುಂದಾದ ಮಹಿಳೊಬ್ಬರ ವ್ಯಾನಿಟಿ ಬ್ಯಾಗ್’ನ್ನು ಬ್ಯಾಗೇಜ್ ಸ್ಕ್ಯಾನಿಂಗ್ ಮೆಷೀನ್ ನಲ್ಲಿ ಸ್ಕ್ಯಾನಿಂಗ್ ಗೆ ಒಳಪಡಿಲಾಗಿತ್ತು. ಬ್ಯಾಗ್ ಒಳಗೆ ಹೋಗುತ್ತಿದ್ದಂತೆ, ಅದರಲ್ಲಿ ಚಾಕು ಇರುವುದನ್ನು ಸ್ಕ್ಯಾನಿಂಗ್ ಸ್ಕ್ರೀನ್ ನಲ್ಲಿ ಭದ್ರತಾ ಸಿಬ್ಬಂದಿಯು ವೀಕ್ಷಿಸಿದ್ದಾರೆ. ಕೂಡಲೇ ಆ ಬ್ಯಾಗ್ ಅನ್ನು ಹೊರಗೆಳೆದು ಅದರಲ್ಲಿದ್ದ ವಸ್ತುಗಳನ್ನು ಹೊರಹಾಕಿ ಚಾಕುವನ್ನು ವಶಪಡಿಸಿಕೊಳ್ಳಲಾಗಿದೆ.
ಇದೇ ವೇಳೆ ಮಹಿಳೆಯನ್ನೂ ಸಹ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗಿದೆ. ಮಹಿಳೆಯ ಕುರಿತ ವಿವರಗಳು ಬಹಿರಂಗವಾಗಿಲ್ಲ. ಆದರೆ, ಕೆಲವು ಮೂಲಗಳು ಆಕೆಯು ವಿಧಾನಸೌಧದ ಮಹಿಳಾ ಸಿಬ್ಬಂದಿ ಎಂದು ಮಾಹಿತಿ ನೀಡಿವೆ.