main logo

Video:ಯುವತಿಯನ್ನು ಅಟ್ಟಾಡಿಸಿ ಕೊಂದ ಹಮಾಸ್‌

Video:ಯುವತಿಯನ್ನು ಅಟ್ಟಾಡಿಸಿ ಕೊಂದ ಹಮಾಸ್‌

ಇಸ್ರೇಲ್‌ ಹಮಾಸ್‌ ಸಂಘರ್ಷ ಆರಂಭವಾಗಿ ತಿಂಗಳುಗಳೇ ಕಳೆದಿದೆ. ಈ ವೇಳೆ ಸಾವಿರಾರು ಅಮಾಯಕರು ಪ್ರಾಣತೆತ್ತಿದ್ದಾರೆ. ಇದೀಗ ಹಮಾಸ್‌ ಉಗ್ರರ ಅಟ್ಟಹಾಸದ ವಿಡಿಯೋವೊಂದು ವೈರಲ್‌ ಆಗುತ್ತಿದೆ. ಇಸ್ರೇಲ್​​​ ಒಂದು ಘನಘೋರ ವಿಡಿಯೋವನ್ನು ಬಿಡುಗಡೆ ಮಾಡಿದೆ. ಹಮಾಸ್​​​ ಉಗ್ರನೊಬ್ಬ ಇಸ್ರೇಲ್ ಯುವತಿಯನ್ನು ಅಟ್ಟಾಡಿಸಿಕೊಂಡು ಹೋಗಿ ಗುಂಡಿಕ್ಕಿ ಕೊಂದಿರುವುದನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ.

ಅಕ್ಟೋಬರ್​​​ 7ರಂದು ಹಮಾಸ್​​ ಉಗ್ರರು ಇಸ್ರೇಲ್​​​ ಮೇಲೆ ರಾಕೆಟ್​​​ ದಾಳಿ ಮಾಡಿದ್ದಾರೆ. ಇದರ ಜತೆಗೆ ಇಸ್ರೇಲ್​​​ನ ಹೊರಂಗಣದಲ್ಲಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮದ ಮೇಲೆಯು ದಾಳಿ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಬಂದೂಕುಧಾರಿಯೊಬ್ಬ ಯುವತಿಯೊಬ್ಬನ್ನು ಅಟ್ಟಾಡಿಸಿಕೊಂಡು ಹೋಗಿ, ಗುಂಡಿಕ್ಕಿ ಕೊಂದಿದ್ದಾನೆ. ಇದೀಗ ಈ ವಿಡಿಯೋವನ್ನು ಇಸ್ರೇಲ್​​​​ ಬಿಡುಗಡೆ ಮಾಡಿದೆ.

Related Articles

Leave a Reply

Your email address will not be published. Required fields are marked *

error: Content is protected !!