ನವದೆಹಲಿ: ಕೆನಡಾದಲ್ಲಿರುವ ಸಿಖ್ಸ್ ಫಾರ್ ಜಸ್ಟಿಸ್ (ಎಸ್‌ಎಫ್‌ಜೆ) ಎಂಬ ಭಯೋತ್ಪಾದಕ ಗುಂಪಿನ ಮುಖ್ಯಸ್ಥ ಗುರುಪತ್‌ವಂತ್ ಪನ್ನುನ್, ಭಯಾನಕ ಹೇಳಿಕೆ ನೀಡಿದ್ದಾನೆ. ಹಮಾಸ್ ರೀತಿಯಲ್ಲೇ ಭಾರತದ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದ್ದಾನೆ.
ಮಂಗಳವಾರ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಇತ್ತೀಚಿನ ವಿಡಿಯೊದಲ್ಲಿ ಈತನ ಹೇಳಿಕೆಗಳು ಬಹಿರಂಗಗೊಂಡಿವೆ. ಈ ವಿಡಿಯೊದಲ್ಲಿ ಪನ್ನುನ್ ಭಾರತಕ್ಕೆ ಬೆದರಿಕೆ ಹಾಕುವುದನ್ನು ಕಾಣಬಹುದಾಗಿದೆ.
ಪ್ರಧಾನಿ ಮೋದಿ ಪ್ಯಾಲೆಸ್ತೀನ್- ಇಸ್ರೇಲ್ ಸಂಘರ್ಷದಿಂದ ಕಲಿಯುವುದು ಬಹಳಷ್ಟಿದೆ. ಪಂಜಾಬ್‌ನಿಂದ ಹಿಡಿದು ಪ್ಯಾಲೆಸ್ತೀನ್‌ವರೆಗೆ ಆಕ್ರಮಣದಲ್ಲಿರುವ ಜನರು ಪ್ರತಿಕ್ರಿಯಿಸುತ್ತಾರೆ. ಹಿಂಸಾಚಾರವು ಹಿಂಸಾಚಾರವನ್ನೇ ಹುಟ್ಟುಹಾಕುತ್ತದೆ ಎಂದು ಹೇಳಿದ್ದಾರೆ.
ಭಾರತವು ಪಂಜಾಬ್ ಅನ್ನು ಆಕ್ರಮಿಸಿಕೊಳ್ಳಲು ಹೋದರೆ, ಪ್ರತಿಕ್ರಿಯೆಯೂ ಹಮಾಸ್‌ನಂತೆ ಇರಲಿದೆ ಎಂದು ಬೆದರಿಕೆಯೊಡ್ಡಿದ್ದಾನೆ. ಮೋದಿ ಮತ್ತು ಭಾರತ ಇದಕ್ಕೆ ಜವಾಬ್ದಾರರಾಗಿರುತ್ತೀರಿ. ನಮಗೆ ಮತದಾನದಲ್ಲಿ ನಂಬಿಕೆ ಇದೆ. ನಾವು ಮತವನ್ನು ನಂಬುತ್ತೇವೆ. ಆದರೆ, ಪಂಜಾಬ್‌ನ ವಿಮೋಚನೆಯು ನಮ್ಮ ಗುರಿಯಾಗಿದೆ. ಭಾರತೀಯರೇ ಆಯ್ಕೆ ನಿಮ್ಮದಾಗಿದೆ. ನಿಮಗೆ ಬ್ಯಾಲೆಟ್ ಬೇಕಾ ಅಥವಾ ಬುಲೆಟ್ ಬೇಕಾ ಎಂದು ಆತ ವಿಡಿಯೊದಲ್ಲಿ ಕೇಳುತ್ತಿರುವುದು ಕಂಡುಬರುತ್ತದೆ.
🚨 Khalistani terrorist Gurpatwant Singh Pannu, suppprted by Canadian PM Justin Trudeau, has released a video threatening to attack India in the same way as Hamas has attacked Israel.
“He says India will also face attacks from Punjab just like Hamas Terrorists attacked Israel.” pic.twitter.com/xsNeNSkF9B
— OSINT Updates (@OsintUpdates) October 10, 2023