Site icon newsroomkannada.com

ವಿಶ್ವ ಹಿಂದೂ ಪರಿಷತ್ ನ 60 ನೇ ವರ್ಷಾಚರಣೆ: ಅ.9 ರಂದು ಬೃಹತ್ ಶೌರ್ಯಯಾತ್ರೆ

ಮಂಗಳೂರು: ವಿಶ್ವ ಹಿಂದೂ ಪರಿಷತ್ ನ 60 ನೇ ವರ್ಷಾಚರಣೆ ಹಿನ್ನೆಲೆ, ಮಂಗಳೂರಿನಲ್ಲಿ ಬೃಹತ್ ಶೌರ್ಯಯಾತ್ರೆ ಆಯೋಜನೆ ಮಾಡಲಾಗಿದೆ.

ಅಕ್ಟೋಬರ್ 9 ರಂದು ಈ ಬೃಹತ್ ಶೌರ್ಯಯಾತ್ರೆ ನಡೆಯಲಿದ್ದು, ಈ ಶೌರ್ಯಯಾತ್ರೆಯ ಉಪರಥ ಯಾತ್ರೆಗೆ ಮಂಗಳೂರಿನಲ್ಲಿ ಆರ್ ಎಸ್ ಎಸ್ ಮುಖಂಡ ಪ್ರಕಾಶ ಚಾಲನೆ ನೀಡಿದ್ದಾರೆ.

ವಿ ಎಚ್ ಪಿ ಮತ್ತು ಬಜರಂಗದಳ ದ ನೇತೃತ್ವದಲ್ಲಿ ನಡೆಯಲಿರುವ ಶೌರ್ಯಯಾತ್ರೆ, ಸನಾತನ ಧರ್ಮದ ರಕ್ಷಣೆ ಹಾಗು ಹಿಂದೂಗಳ ಜಾಗೃತಿಗೋಸ್ಕರ, ಗೋವುಗಳ, ದೇವಸ್ಥಾನಗಳು, ಶೃದ್ದಾ ಕೇಂದ್ರಗಳನ್ನು ಉಳಿಸಿ ಬೆಳೆಸಲು, ಲವ್ ಜಿಹಾದ್, ಮತಾಂತರ, ಗೋಹತ್ಯೆ ತಡೆದು ಹಿಂದೂ ಧರ್ಮದ ರಕ್ಷಣೆಗಾಗಿ ನಡೆಯಲಿದೆ.

ನಗರದ ಅಂಬೇಡ್ಕರ್ ವೃತ್ತದಿಂದ ಬೃಹತ್ ಶೋಭಾಯಾತ್ರೆ ನಡೆದು, ಕದ್ರಿ ಮೈದಾನದಲ್ಲಿ ಅಕ್ಟೋಬರ್ 9 ರಂದು ಬೃಹತ್ ಸಾರ್ವಜನಿಕ ಸಭೆ ನಡೆಯಲಿದೆ.

Exit mobile version