main logo

ನ.17ರೊಳಗೆ HSRP ನಂಬರ್‌ ಪ್ಲೇಟ್‌ ಹಾಕಿಸಿಕೊಳ್ಳದಿದ್ದಲ್ಲಿ ಬೀಳಲಿದೆ ದುಬಾರಿ ದಂಡ!

ನ.17ರೊಳಗೆ HSRP ನಂಬರ್‌ ಪ್ಲೇಟ್‌ ಹಾಕಿಸಿಕೊಳ್ಳದಿದ್ದಲ್ಲಿ ಬೀಳಲಿದೆ ದುಬಾರಿ ದಂಡ!

ಮಂಗಳೂರು: 2019ರ ಏಪ್ರಿಲ್‌ 1ರ ಮೊದಲು ನೋಂದಣಿಯಾಗಿರುವ ವಾಹನಗಳ ಹಳೇ ನಂಬರ್‌ ಪ್ಲೇಟ್‌ಗಳನ್ನು ನ.17ರೊಳಗೆ ಬದಲಾಯಿಸಿ ಅತಿ ಸುರಕ್ಷಿತ ನೋಂದಣಿ ಫಲಕ ಅಳವಡಿಸಬೇಕೆಂದು ಸಾರಿಗೆ ಇಲಾಖೆ ನಿಯಮ ಹೊರಡಿಸಿದ್ದು, ಕರಾವಳಿಯಲ್ಲಿ ಎಚ್‌ಎಸ್‌ ಆರ್‌ಪಿ ನೋಂದಣಿ ಫಲಕ ಅಳವಡಿಕೆಗೆ ಭಾರಿ ಕ್ಯೂ ಕಂಡುಬರುತ್ತಿದೆ.

ದೇಶದ ಎಲ್ಲ ಕಡೆ ಭಯೋತ್ಪಾದಕರು, ದರೋಡೆಕೋರರು, ಸೇರಿದಂತೆ ಅಕ್ರಮ ಕೃತ್ಯ ನಡೆಸುವವರು ನಕಲಿ ನಂಬರ್‌ ಪ್ಲೇಟ್‌ಗಳನ್ನು ವಾಹನಗಳಿಗೆ ಅಳವಡಿಸಿ ಕೃತ್ಯ ನಡೆಸುತ್ತಾರೆ. ಇಂತಹ ಕಾನೂನು ಬಾಹಿರ ಕೃತ್ಯ ತಡೆಯುವ ಉದ್ದೇಶದಿಂದಲೇ ಈಗ ಎಚ್‌ ಎಸ್‌ ಆರ್‌ಪಿ ವಾಹನ ನೋಂದಣಿ ನಂಬರ್‌ ಗಳನ್ನು ಅಳವಡಿಸುವಂತೆ ಸಾರಿಗೆ ಇಲಾಖೆ ಜನರಿಗೆ ಸೂಚಿಸಿದೆ.

2019ರ ಏಪ್ರಿಲ್‌ ನಂತರ ನೋಂದಣಿಯಾದ ವಾಹನಗಳಿಗೆ ವಾಹನ ಮಾರಾಟವಾದ ಡೀಲರ್‌ಗಳ ಮೂಲಕವೇ ನಂಬರ್‌ ಪ್ಲೇಟ್‌ ನೀಡಲಾಗುತ್ತಿತ್ತು. ಈ HSRP ನಂಬರ್‌ ಪ್ಲೇಟ್‌ ಆಗದೆ ವಾಹನ ಆರ್‌ಸಿ ಸಿಗುತ್ತಿರಲಿಲ್ಲ. 2019ಕ್ಕಿಂತ ಮೊದಲು ನೋಂದಣಿಯಾದ ವಾಹನಗಳು ಇದೀಗ ಎಚ್‌ಆಸ್‌ಆರ್‌ ಪಿ ನಂಬರ್‌ ಪ್ಲೇಟ್‌ ಅಳವಡಿಸುವುದು ಕಡ್ಡಾಯವಾಗಿದೆ.

ನಂಬರ್‌ ಪ್ಲೇಟ್‌ ಪಡೆಯಲು ಏನು ಮಾಡಬೇಕು: HSRP ನೋಂದಣಿ ನಂಬರ್‌ ಪ್ಲೇಟ್‌ ಹಳೆ ಮಾದರಿಯ ವಾಹನ ನೋಂದಣಿ ಕ್ರಮಕ್ಕಿಂತ ಭಿನ್ನವಾಗಿದೆ. ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅನ್ನು 20X20 ಎಂಎಂ ಗಾತ್ರದಲ್ಲಿ ಹಾಟ್‌ ಸ್ಟಾಂಪಿಂಗ್‌ ಮೂಲಕ ಮಾಡಲಾಗುತ್ತದೆ.

ಈ HSRP ನಂಬರ್‌ ಪ್ಲೇಟ್‌ ಪಡೆಯಲು https://transport.karnataka.gov.in/ ಸಾರಿಗೆ ಇಲಾಖೆ ವೆಬ್‌ಸೈಟ್‌ ಭೇಟಿ ನೀಡಬೇಕು. ಅಲ್ಲಿ ಬುಕ್‌ HSRP ಮೇಲೆ ಕ್ಲಿಕ್‌ ಮಾಡಿ ಮಾಹಿತಿ ಭರ್ತಿ ಮಾಡಬೇಕು. ಇದಾದ ಬಳಿಕ ವಾಹನ ವಾರೀಸುದಾರರ ಹತ್ತಿರದ ಅಥವಾ ವಾಹನ ಖರೀದಿ ಮಾಡಿದ ಡೀಲರ್‌ನ ಲೊಕೇಶನ್‌ನ್ನು ನೋಂದಾಯಿಸಬೇಕು. ಇದಕ್ಕೆ ಸಂಬಂಧಪಟ್ಟ ಶುಲ್ಕವನ್ನು ಆನ್‌ಲೈನ್‌ ಮೂಲಕವೇ ಪಾವತಿಸಬೇಕಾಗಿದೆ. ಇದಾದ ಬಳಿಕ ವಾಹನದ ಮಾಲೀಕರ ಮೊಬೈಲ್‌ ನಂಬರ್‌ಗೆ OTPಪಿ ಬರಲಿದೆ.

ನಿಗದಿ ಮಾಡಿದ ದಿನಕ್ಕೆ ಡೀಲರ್‌ ಬಳಿ ಹೋಗಿ HSRP ನಂಬರ್‌ ಪ್ಲೇಟ್‌ಗಳನ್ನು ಪಡೆಯಬಹುದಾಗಿದೆ. ಸಾಮಾನ್ಯವಾಗಿ ನಂಬರ್‌ ಪ್ಲೇಟ್‌ ಅಳವಡಿಕೆಯನ್ನು ಡೀಲರ್‌ಗಳು ಉಚಿತವಾಗಿ ಮಾಡುತ್ತಿದ್ದಾರೆ. ಎಚ್‌ಎಸ್‌ಆರ್‌ಪಿ ನೋಂದಣಿ ನಂಬರ್‌ ಅಳವಡಿಕೆಗೆ ಸರಕಾರ ಮಾರ್ಗಸೂಚಿ ಕಳುಹಿಸಿದ್ದು, ನ.17 ಡೆಡ್‌ಲೈನ್‌ ನೀಡಲಾಗಿದೆ. ಆನ್‌ಲೈನ್‌ ಮೂಲಕ ವಾಹನ ಸವಾರರು ಅರ್ಜಿ ಸಲ್ಲಿಸಿ, ಸಂಬಂಧಪಟ್ಟ ಡೀಲರ್‌ಗೆ ನಂಬರ್‌ಪ್ಲೇಟ್‌ ಬರಲಿದೆ.

ನಂಬರ್‌ ಪ್ಲೇಟ್‌ ಇಲ್ಲದಿದ್ದಲ್ಲಿ 1000 ಸಾವಿರ ರೂ,. ದಂಡ: ನವೆಂಬರ್ 17, 2023 ಮೊದಲು ಎಚ್‌ಎಸ್‌ಆರ್‌ಪಿ ನೋಂದಣಿ ಫಲಕಗಳನ್ನು ಪಡೆದುಕೊಳ್ಳುವಂತೆ ರಾಜ್ಯ ಸಾರಿಗೆ ಇಲಾಖೆ ಪ್ರಕಟಿಸಿದೆ. ಆಗಸ್ಟ್ 17, 2023 ರಂದು ಹೊರಡಿಸಲಾದ ಅಧಿಸೂಚನೆಯಲ್ಲಿ, ನವೆಂಬರ್ 17ರೊಳಗೆ ಯಾರು ಹೊಸ ನಂಬರ್‌ ಪ್ಲೇಟ್‌ ಹಾಕಿಸಿಕೊಳ್ಳುವುದಿಲ್ಲವೋ ಅಂತಹ ವಾಹನ ಮಾಲೀಕರಿಗೆ ರೂ 500 ರಿಂದ ರೂ 1,000 ವರೆಗೆ ದಂಡ ವಿಧಿಸಲಾಗುತ್ತದೆ ಎಂದು ಇಲಾಖೆ ಆದೇಶಿಸಿದೆ.

Related Articles

Leave a Reply

Your email address will not be published. Required fields are marked *

error: Content is protected !!