Site icon newsroomkannada.com

ಉದ್ಯಾವರದ ಯುವಕ ಮಂಗಳೂರಿನ ಪಿಜಿಯಲ್ಲಿ ಆತ್ಮಹತ್ಯೆ

Udyavar: ICYM unit member Royal Lewis commits suicide

ಉಡುಪಿ: ಉದ್ಯಾವರ ನಿವಾಸಿ, ಐಸಿವೈಎಂ ಉದ್ಯಾವರ ಘಟಕದ ಸದಸ್ಯ ರೋಯಲ್ ಲೂವಿಸ್ (22) ಮಂಗಳೂರಿನ ಪಿಜಿಯೊಂದರಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತ ರೋಯಲ್ ಉದ್ಯಾವರ ನಿವಾಸಿ ರೋಸಿ ಲೂಯಿಸ್ ಅವರ ಪುತ್ರ. ಇವರು ಐಸಿವೈಎಂ ಉದ್ಯಾವರ ಘಟಕದ ಸಕ್ರಿಯ ಸದಸ್ಯನಾಗಿದ್ದರು. ಉಡುಪಿಯ ಹೆಲ್ತ್ ಕೇರ್ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದರು. ಇತ್ತೀಚೆಗೆ ಅದನ್ನು ಬಿಟ್ಟು ಮಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದರು. ಅಲ್ಲಿಯೇ ಪಿಜಿಯಲ್ಲಿ ವಾಸವಾಗಿದ್ದರು.

ನಿನ್ನೆ ರೋಯಲ್ ವಿಷ ಸೇವಿಸಿದ್ದು, ಇದನ್ನು ಗಮನಿಸಿದ ಸ್ಥಳೀಯರು ಆತನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೃತ ರೊಯಲ್ ತಾಯಿ ಹಾಗೂ ಸಹೋದರನನ್ನು ಅಗಲಿದ್ದಾರೆ.

Exit mobile version