ಮಂಗಳೂರು: ರಾಜ್ಯದ ಜನರನ್ನೆ ಬೆಚ್ಚಿಬೀಳಿಸಿದ್ದ ನಾಲ್ವರ ಹತ್ಯೆ ಆರೋಪಿಯನ್ನು ಉಡುಪಿ ಪೊಲೀಸರು ಸ್ಥಳ ಪರಿಶೀಲನೆಗಾಗಿ ಮಂಗಳೂರು ನಗರದ ಪದವಿನಂಗಡಿ ನಿವಾಸಕ್ಕೆ ಕರೆತಂದಿದ್ದಾರೆ, ಆರೋಪಿ ಪ್ರವೀಣ್ ಚೌಗುಲೆ ಪದವಿನಂಗಡಿಯ ಮನೆಯಲ್ಲಿ ನೆಲೆಸಿದ್ದು, ಅಲ್ಲಿಗೆ ಆರೋಪಿಯನ್ನು ಕರೆತಂದು ಆತ ಕೃತ್ಯಕ್ಕೆ ಬಳಸಿದ್ದ ಚಾಕು ಪತ್ತೆಗಾಗಿ ತೀವ್ರ ಶೋಧ ನಡೆಸಿದ್ದಾರೆ. ಈಗಾಗಲೇ ಕೃತ್ಯಕ್ಕೆ ಬಳಸಿದ್ದ ಹಲವು ವಸ್ತುಗಳನ್ನು ನವೆಂಬರ್ 17 ಮತ್ತು 18 ರಂದು ವಶಪಡಿಸಿಕೊಳ್ಳಲಾಗಿದ್ದು, ಇದೀಗ ಕೃತ್ಯಕ್ಕೆ ಬಳಸಿದ್ದ ಚಾಕುವಿಗಾಗಿ ಪೊಲೀಸರು ತಲಾಶ್ ನಡೆಸಿದ್ದಾರೆ.