Site icon newsroomkannada.com

ಉಡುಪಿ ಕೊಲೆ ಪ್ರಕರಣದ ಆರೋಪಿ ಬೆಳಗಾವಿಯಲ್ಲಿ ಸೆರೆ: ಮಂಗಳೂರು ಏರ್‌ ಪೋರ್ಟ್‌ನಲ್ಲಿ ಆರೋಪಿ ಏನು ಮಾಡುತ್ತಿದ್ದ ಗೊತ್ತಾ

ಬೆಳಗಾವಿ: ಉಡುಪಿ ಜಿಲ್ಲೆ ನೇಜಾರಿನಲ್ಲಿ ನಡೆದ ಒಂದೇ ಕುಟುಂಬದ ನಾಲ್ವರ‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ, ಉಡುಪಿ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಳಗಾವಿಯ ಕುಡುಚಿಯಲ್ಲಿ ಬಂಧಿಸಿದ ಉಡುಪಿ ಪೊಲೀಸರು ಪ್ರವೀಣ್​​​​ ಅರುಣ್​​​ ಚೌಗಲೆ ಎಂಬಾತನನ್ನು ಬಂಧಿಸಿದ್ದಾರೆ. ಈತ ಮಂಗಳೂರು ಏರ್​​ ಏರ್​ಪೋರ್ಟ್​ ಸೆಕ್ಯೂರಿಟಿಯಲ್ಲಿಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಸಿಆರ್‌ ಪಿಎಫ್‌ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಆರೋಪಿ ಮಹಾರಾಷ್ಟ್ರ ಸಾಂಗ್ಲಿ ಮೂಲದವನಾಗಿದ್ದಾನೆ ಎನ್ನಲಾಗಿದೆ. ಕುಡಚಿಯಲ್ಲಿರುವ ಸಂಬಂಧಿಯೊಬ್ಬರ ಮನೆಯಲ್ಲಿ ಆರೋಪಿ ಅವಿತುಕೊಂಡಿದ್ದು, ಮೊಬೈಲ್​​ ಟವರ್​ ಲೊಕೇಶನ್​​​ ಆಧರಿಸಿ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. ನವೆಂಬರ್​ 12ರಂದು ನೇಜಾರಿನ ತೃಪ್ತಿ ಲೇಔಟ್‌ ನಲ್ಲಿರುವ ಮನೆಗೆ ಬಂದು ತಾಯಿ ಮೂವರು ಮಕ್ಕಳನ್ನು ಕೊಲೆ ಮಾಡಿದ್ದ.

Exit mobile version